ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಕನೇರ್-ಜೋಧ್‍ಪುರ್ ಹೆದ್ದಾರಿಯಲ್ಲಿ ಅಪಘಾತ: 11 ಯಾತ್ರಾರ್ಥಿಗಳು ಸಾವು

ಜೈಪುರ್: ರಾಜಸ್ಥಾನದ ನಾಗೂರ್ ಜಿಲ್ಲೆಯ ಬಿಕನೇರ್-ಜೋಧ್‍ಪುರ್ ಹೆದ್ದಾರಿಯಲ್ಲಿ ಮಂಗಳವಾರ ಭೀಕರ ಅಪಘಾತ ನಡೆದಿದೆ. ಕ್ರೂಸರ್ ವಾಹನ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 11 ಮಂದಿ ಯಾತ್ರಾರ್ಥಿಗಳು ಮೃತಪಟ್ಟಿದ್ದು ಇತರ 7 ಮಂದಿ ಗಾಯಗೊಂಡಿದ್ದಾರೆ.

ಬಿಕನೇರ್-ಜೋಧ್‍ಪುರ್ ಹೆದ್ದಾರಿಯಲ್ಲಿರುವ ಶ್ರೀ ಬಾಲಾಜಿ ದೇವಸ್ಥಾನದ ಮುಂಭಾಗ ವ್ಯಾನ್ ಮತ್ತು ಟ್ರಕ್ ನಡುವೆ ಸಂಭವಿಸಿದ ಮುಖಾಮುಖಿಯಲ್ಲಿ ಈ ದುರಂತೆ ಸಂಭವಿಸಿದೆ. ಮೃತರನ್ನು ಉಜ್ಜನಿ ಜಿಲ್ಲೆಯವರೆಂದು ಗುರುತಿಸಲಾಗಿದ್ದು, ಅವರೆಲ್ಲಾ ರಾಮದೇವರ ಮತ್ತು ಕರ್ನಿಮಠದಲ್ಲಿರುವ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮನೆಗೆ ಹಿಂತಿರುಗುತ್ತಿದ್ದವರು ಎನ್ನಲಾಗಿದೆ.

ರಾಮ್ ದೆವ್ರಾ ಹಾಗೂ ಕರ್ಣಿಮಠ ದೇಗುಲಗಳಲ್ಲಿ ದರ್ಶನ ಪಡೆದು ವಾಪಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಪ್ರಯಾಣಿಕರು ಮಧ್ಯಪ್ರದೇಶದ ಉಜ್ಜೈನಿ ಜಿಲ್ಲೆಯವರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯ ಮಂತ್ರಿ ಅಶೋಕ್ ಗೆಹ್ಲೋಟ್ ಘಟನೆಯ ಬಗ್ಗೆ ಶೋಕ ವ್ಯಕ್ತಪಡಿಸಿದ್ದಾರೆ.

Edited By : Nagaraj Tulugeri
PublicNext

PublicNext

31/08/2021 02:12 pm

Cinque Terre

51.2 K

Cinque Terre

0

ಸಂಬಂಧಿತ ಸುದ್ದಿ