ಮಲ್ಪೆ: ನಿನ್ನೆ ಸಮುದ್ರದ ಪಾಲಾಗಿದ್ದ ಯುವತಿ ಇಂದು ಶವವಾಗಿ ಪತ್ತೆಯಾದ ಘಟನೆ ಮಲ್ಪೆ ಕಡಲಕಿನಾರೆಯಲ್ಲಿ ನಡೆದಿದೆ.
ಉಡುಪಿಯ ಮಲ್ಪೆಯಲ್ಲಿ ನಿನ್ನೆ ಸಮುದ್ರಕ್ಕಿಳಿದಿದ್ದ ಯುವತಿ ,ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿದ್ದರು.ಪ್ರವಾಸಕ್ಕೆಂದು ಉಡುಪಿಗೆ ಬಂದಿದ್ದ ಕೊಡುಗು ಮೂಲದ ದೇಚ್ಚಮ್ಮ ಸಾವಿಗೀಡಾದ ಯುವತಿಯಾಗಿದ್ದಾರೆ.
ಇಂದು ಬೆಳಗ್ಗೆ ಮಲ್ಪೆ ಸೀವಾಕ್‌ನ ಬಳಿ ದೇಚಮ್ಮ ಶವ ಪತ್ತೆಯಾಗಿದೆ.ಮೈಸೂರಿನ ಯುವಕನೊಂದಿಗೆ ಬಂದಿದ್ದ ಕೊಡಗು ಮೂಲದ ಮೂವರು ಯುವತಿಯರು,ನಿನ್ನೆ ಸಂಜೆ ವೇಳೆ ಮಲ್ಪೆ ಸಮುದ್ರದಲ್ಲಿ ಲೈಫ್ ಗಾರ್ಡ್‌ಗಳ ಸೂಚನೆ ಲೆಕ್ಕಿಸದೇ ಅಲೆಗಳ ಜೊತೆಗೆ ಆಟವಾಡುತ್ತಿದ್ದರು.ಅಲೆಗಳ ರಭಸಕ್ಕೆ ನಾಲ್ಕು ಮಂದಿ ಕೊಚ್ಚಿ ಹೋಗಿದ್ದರು.ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ದೇಚಮ್ಮ ನಾಪತ್ತೆ ಆಗಿದ್ದರು.ಇವತ್ತು ಅವರ ಶವ ಪತ್ತೆಯಾಗಿದೆ.ಮಲ್ಪೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
PublicNext
02/08/2021 02:19 pm