ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಶೇಂಗಾ ಎಡೆಕುಂಟೆಗೆ ಎತ್ತುಗಳಿಗೆ ಗುಡ್ ಬೈ ಹೇಳಿ, ಬೈಕ್ ಬಳಕೆ

ಚಿತ್ರದುರ್ಗ : ಆಧುನಿಕತೆಯ ಭರಾಟೆಯಲ್ಲಿ ತಂತ್ರಜ್ಞಾನ ಬೆಳೆದಂತೆ ಕೃಷಿ ಚಟುವಟಿಕೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇತ್ತೀಚಿನ ದಿನಗಳಲ್ಲಿ ರೈತರು ಎತ್ತುಗಳ ಬೇಸಾಯಕ್ಕೆ ಗುಡ್ ಬೈ ಹೇಳಿ, ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ಅಂದಹಾಗೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರುಶುರಾಂಪುರ ದೊಡ್ಡ ಗೊಲ್ಲರಹಟ್ಟಿಯ ರೈತನೊಬ್ಬ ಶೇಂಗಾ ಗಿಡಗಳಿಗೆ ಎಡೆಕುಂಟೆ ಹೊಡೆಯಲು ಎತ್ತುಗಳ ಬದಲಿಗೆ ಬೈಕ್ ಬಳಸಿಕೊಂಡು ಎಡೆಹೊಡೆಯುತ್ತಿರುವ ವೀಡಿಯೋ ವೈರಲ್ ಆಗುತ್ತಿದೆ.

ರೈತನ ಬೈಕಿನ ಹಿಂಬಾಗದಲ್ಲಿ ನೊಗ ಕಟ್ಟಿ, ಮೂರು ಎಡೆಕುಂಟೆಯನ್ನು ಕಟ್ಟಲಾಗಿದೆ. ನಂತರ ಬೈಕ್ ಓಡಿಸಿಕೊಂಡು ಎಡೆ ಹೊಡೆಯಲು‌ ಮುಂದಾಗಿದ್ದಾರೆ. ಎರಡು ಎತ್ತುಗಳಿಗೆ ನೊಗ ಕಟ್ಟಿ ಎಡೆ ಹೊಡೆಯಲು ನಾಲ್ಕು ಸಾವಿರ ಗಂಟೆಗೆ ನಾಲ್ಕು ಜನರಿಗೆ ನಾನೂರು ರೂಪಾಯಿಗಳು ಆಗುತ್ತದೆ. ಆದರೆ ಒಂದು ಲೀಟರ್ ಪೇಟ್ರೋಲ್ ಹಾಕಿದರೆ ಆರು ಎರಕೆ ಎಡೆಕುಂಟೆ ಹೊಡೆಯಬಹುದು. ಒಂದು ಕಡೆ ಸಮಯದ ಉಳಿತಾಯ ಹಾಗೂ ಹಣದ ಉಳಿತಾಯವೂ ಆಗುತ್ತದೆ ಎಂದು ರವಿಕುಮಾರ್ ಹೇಳುತ್ತಾರೆ.

ವರದಿ ಪಬ್ಲಿಕ್ ನೆಕ್ಸ್ಟ್ ಪ್ರತಿನಿಧಿ ಚಿತ್ರದುರ್ಗ

Edited By : Shivu K
PublicNext

PublicNext

01/08/2021 11:02 am

Cinque Terre

91.21 K

Cinque Terre

2

ಸಂಬಂಧಿತ ಸುದ್ದಿ