ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೆಲ್ಫಿ ಗೀಳು: ನೀರುಪಾಲಾದ ಅಪ್ಪ ಮಗ

ಮುಂಬೈ: ಇತ್ತೀಚೆಗೆ ಯಾವುದೇ ಸ್ಥಳಕ್ಕೆ ಹೋದರೂಜನರಿಗೆ ಸೆಲ್ಫಿ ತೆಗೆದುಕೊಳ್ಳುವುದು ತೀರಾ ಸಾಮಾನ್ಯ ಎನ್ನುವಂತಾಗಿದೆ. ಆದರೆ ಅಪಾಯಕಾರಿ ಸ್ಥಳಗಳಲ್ಲಿ ನಿಂತು ಸೆಲ್ಫಿಗೆ ಪೋಸ್ ಕೊಡುವುದು ಅದೆಷ್ಟು ಡೇಂಜರಸ್ ಎನ್ನುವುದು ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಆದರೂ ಸೆಲ್ಫಿ ಪ್ರಿಯರ ಸಂಖ್ಯೆಯೇನು ಕಡಿಮೆಯಾಗಿಲ್ಲ.

ನದಿಯೊಂದರಲ್ಲಿ ದೋಣಿ ವಿಹಾರಕ್ಕೆ ಹೋದ ಕುಟುಂಬದ ಅಪ್ಪ ಮಗ ಸೆಲ್ಫಿಗೆ ಫೋಸ್ ಕೊಡಲು ಹೋಗಿ ನೀರಿನಲ್ಲಿ ಮುಳುಗಿ ಸತ್ತಿರುವ ಘಟನೆ ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದಿದೆ. ಆ ಕುಟುಂಬ ದೋಣಿ ವಿಹಾರಕ್ಕೆಂದು ಉಜನಿ ಹಿನ್ನೀರಿನ ಬಳಿ ತೆರಳಿತ್ತು. ಗಂಡ, ಹೆಂಡತಿ, ಇಬ್ಬರು ಮಕ್ಕಳು ಹಾಗೂ ಇಬ್ಬರು ಸ್ನೇಹಿತರು ಸೇರಿ ಒಟ್ಟು ಆರು ಮಂದಿ ಒಂದು ದೋಣಿಯಲ್ಲಿ ಕುಳಿತುಕೊಂಡು ದೋಣಿ ವಿಹಾರ ಆರಂಭಿಸಿದ್ದಾರೆ.

ದೋಣಿಯಲ್ಲಿ ಕುಳಿತುಕೊಂಡು ಸೆಲ್ಫಿ ತೆಗೆದುಕೊಳ್ಳಲಾರಂಭಿಸಿದ್ದಾರೆ. ಸೆಲ್ಫಿ ತೆಗೆದುಕೊಳ್ಳುತ್ತಾ ದೋಣಿಯ ತುದಿಗೆ ಹೋಗಿದ್ದಾರೆ. ತುದಿಯಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ದೋಣಿಯ ನಿಯಂತ್ರಣ ತಪ್ಪಿ ಮಗುಚಿದೆ. ಆರೂ ಮಂದಿ ನೀರಿನೊಳಗೆ ಬಿದ್ದಿದ್ದಾರೆ.

ಈ ವೇಳೆ ಮೀನುಗಾರರು ನೀರಿಗೆ ಧುಮುಕಿ, ರಕ್ಷಣೆಗೆ ಮುಂದಾಗಿದ್ದಾರೆ. ಆರರಲ್ಲಿ ನಾಲ್ವರನ್ನು ರಕ್ಷಿಸಲಾಗಿದೆ. ಆದರೆ ಅದರಲ್ಲಿದ್ದ 13 ವರ್ಷದ ಮಗ ಮತ್ತು 49 ವರ್ಷದ ಅಪ್ಪನನ್ನು ದಡಕ್ಕೆ ತರುವುದರಷ್ಟರಲ್ಲಿ ಅವರು ಪ್ರಾಣ ಬಿಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Edited By : Nirmala Aralikatti
PublicNext

PublicNext

01/03/2021 07:58 pm

Cinque Terre

44.37 K

Cinque Terre

2

ಸಂಬಂಧಿತ ಸುದ್ದಿ