ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಿಫ್ಟ್ ಕೇಳಿದ ಟೀಚರ್ ಸಾವಿಗೆ ಶಿಫ್ಟ್: ಕಾಲುವೆಯಲ್ಲಿ ಕೊಚ್ಚಿ ಹೋದ ಕಾರು

ವರಂಗಲ್​: ಇಲ್ಲಿನ ಎಸ್​ಆರ್​ಎಸ್​ಪಿ ಕಾಲುವೆಯೊಂದರಲ್ಲಿ ಕಾರೊಂದು ಕೊಚ್ಚಿ ಹೋಗಿರುವ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವರಂಗಲ್​ನಿಂದ ತೋರೂರ್​ ಗ್ರಾಮಕ್ಕೆ ಮೂವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಇದೇ ಮಾರ್ಗದಲ್ಲಿ ಸಂಗಂ ತಾಲೂಕಿನ ತಿಗರಾಜು ಪಲ್ಲಿ ಗ್ರಾಮದ ಬಳಿ ಸರ್ಕಾರಿ ಶಾಲೆಯ ಶಿಕ್ಷಕಿ ಸರಸ್ವತಿ ಲಿಫ್ಟ್​ ಕೇಳಿ ಕಾರು ಹತ್ತಿದ್ದಾರೆ. ಪರ್ವತಗಿರಿ ತಾಲೂಕಿನ ಕೊಂಕಪಾಕ ಬಳಿ ಪ್ರಯಾಣಿಸುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಕೆನಾಲ್​ಗೆ ಉರುಳಿ ಬಿದ್ದಿದೆ. ತುಂಬಿ ಹರಿಯುತ್ತಿದ್ದ ಕೆನಾಲ್​ನಲ್ಲಿ ಕಾರು ಕೊಚ್ಚಿಕೊಂಡು ಹೋಗಿದೆ. ಈ ವೇಳೆ ಕಾರಿನಲ್ಲಿದ್ದ ಶಿಕ್ಷಕಿ ಸರಸ್ವತಿ, ಶ್ರೀಧರ್​ ಮತ್ತು ಚಾಲಕ ರಾಕೇಶ್​ ಕಾರಿನಲ್ಲೇ ಸಿಲುಕಿಕೊಂಡು ಮೃತಪಟ್ಟಿದ್ದಾರೆ. ಆದ್ರೆ ವಿಜಯ ಭಾಸ್ಕರ್​ ಎಂಬಾತರನ್ನು ಸ್ಥಳೀಯರು ಕಾಪಾಡುವಲ್ಲಿ ಯಶಸ್ಸಾಗಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತದೇಹಗಳನ್ನು ಕೆನಾಲ್​ನಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಘಟನೆಗೆ ತಕ್ಷಣ ಸ್ಪಂದಿಸಿದ ಪಂಚಾಯತಿ ರಾಜ್ ಸಚಿವ ಎರ್ರಾಬೆಲ್ಲಿ ದಯಾಕರ್ ರಾವ್ ಸ್ಥಳಕ್ಕೆ ಭೇಟಿ ನೀಡಿ ದುರಂತ ಸಾವಿನ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದರು. ಸರ್ಕಾರ ಅವರಿಗೆ ಬೆಂಬಲ ನೀಡಲಿದೆ ಎಂದು ಸಚಿವರು ಭರವಸೆ ನೀಡಿದರು.

Edited By : Nagaraj Tulugeri
PublicNext

PublicNext

10/02/2021 03:54 pm

Cinque Terre

99.45 K

Cinque Terre

4

ಸಂಬಂಧಿತ ಸುದ್ದಿ