ಬೆಳಗಾವಿ: ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಚಚಡಿ – ಗೋಂತಮಾರ ಕ್ರಾಸ್ ಬಳಿ ಕೆಎಸ್ಆರ್ಟಿಸಿ ಬಸ್ ಮತ್ತು ಕಾರಿನ ನಡುವೆ ಮುಖಾ ಮುಖಿ ಡಿಕ್ಕಿಯಾಗಿದ್ದು, ಬೆಳಗಾವಿ ನಗರದ ಮಹಿಳಾ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾದ ಕಾರಣ ಕಾರು ಬಸ್ಸಿನ ಕೆಳಗೆ ಸಿಲುಕಿ ಸಂಪೂರ್ಣ ನುಜ್ಜುಗುಜ್ಜಾಗಿದೆ. ತಕ್ಷಣ ಮುರುಗೋಡ ಪೋಲೀಸರು ಕ್ರೇನ್ ತರಿಸಿ ಬಸ್ಸಿನಿಂದ ಕಾರನ್ನು ಬೇರ್ಪಡಿಸಿದ ಬಳಿಕ ನಾಲ್ವರು ಮೃತಪಟ್ಟಿರುವ ವಿಷಯ ಗೊತ್ತಾಗಿದೆ. ಬೆಳಗಾವಿಯ ಸಹ್ಯಾದ್ರಿ ನಗರದ ನಿವಾಸಿಗಳಾದ ಲಕ್ಷ್ಮಿಪವಾರ್, ಪ್ರಸಾದ್ ಪವಾರ್, ಅಂಕಿತಾ ಪವಾರ್, ದೀಪಾ ಶಹಾಪುರಕರ್ ಎಂಬುವವರೇ ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳು.
PublicNext
24/01/2021 06:21 pm