ಮಳವಳ್ಳಿ: ಹಾವು ಕಚ್ಚಿ ಬಾಲಕ ಮೃತಪಟ್ಟ ಘಟನೆ ಪಟ್ಟಣದ ಉಗ್ರಾಣಪುರದೊಡ್ಡಿ ಬಳಿ ನಡೆದಿದೆ.
ತಾಲ್ಲೂಕಿನ ಕಂದೇಗಾಲ ಗ್ರಾಮದ ನಿವಾಸಿ ಹಾಗೂ ಕಿರುಗಾವಲು ಪಿಎಸಿಎಸ್ ನ ಸಿಇಒ ಶಿವಲಿಂಗು ಪುತ್ರ ಭುವನ್ (9) ಮೃತ ಬಾಲಕ.
ಭಾನುವಾರ ರಾತ್ರಿ ಉಗ್ರಾಣಪುರದೊಡ್ಡಿ ಮನೆಯ ಮುಂದೆ ಮೂತ್ರ ವಿಸರ್ಜನೆಗೆ ಬಂದ ವೇಳೆ ವಿಷಕಾರಿ ಹಾವು ಕಚ್ಚಿದೆ. ತಕ್ಷಣವೇ ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ನಮ್ಮ ಬಳಿ ಔಷಧಿ ಇಲ್ಲ ಎಂದಿದ್ದಾರೆ. ನಂತರ ನಾಟಿ ಔಷಧಿ ಕೊಡಿಸಲಾಗಿತ್ತು.
ಸೋಮವಾರ ಬೆಳಗ್ಗೆ ಬಾಲಕನ ಬಾಯಿಯಲ್ಲಿ ನೊರೆ ಬಂದಿದ್ದು, ಕೂಡಲೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
PublicNext
18/01/2021 03:40 pm