ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಳಿಂಗ ಸರ್ಪದ ದಾಳಿಯಿಂದ ಉರಗ ತಜ್ಞ ಜಸ್ಟ್ ಮಿಸ್

ವಿಶ್ವದ ಅತಿ ಉದ್ದದ ವಿಷಪೂರಿತ ಹಾವು ಕಾಳಿಂಗ ಸರ್ಪ ಅಂದ್ರೆ ಯಾರಿಗೆ ತಾನೆ ಭಯ ಇಲ್ಲ ಹೇಳಿ. ಇದನ್ನು ಹಿಡಿಯುವಾಗ ಸ್ವಲ್ಪ ಯಾಮಾರಿದರೂ ಯಮಲೋಕ ಫಿಕ್ಸ್‌..! ಇಂತಹದ್ದೇ ಪರಿಸ್ಥಿತಿಯಲ್ಲಿ ಉರಗ ತಜ್ಞರೊಬ್ಬರು ಸರ್ಪದ ಕಡಿತದಿಂದ ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ಶಿವಮೊಗ್ಗ ಜಿಲ್ಲೆಯ ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತಿಘಟ್ಟದಲ್ಲಿ ನಡೆದಿದೆ.

ಮತ್ತಿಘಟ್ಟದ ಮನೆಯ ಬಳಿಯ ತೋಟದಲ್ಲಿದ್ದ ಕಾಳಿಂಗ ಸರ್ಪವನ್ನು ರಿಪ್ಪನಪೇಟೆ ಬಳಿಯ ಚಿಕ್ಕಜೇನಿ ಸ್ನೇಕ್ ಪ್ರಭಾಕರ್ ಹಿಡಿಯಲು ಹೋಗಿದ್ದರು. ಆದರೆ ಸರ್ಪವು ತೋಟದ ನಡುವೆ ಇದ್ದ ಕೆರೆಗೆ ಹೋಯಿತು.

ಈ ವೇಳೆ ಕೆರಯಲ್ಲಿದ್ದ ಮರದ ಮೇಲೆ ನಿಂತ ಪ್ರಭಾಕರ್‌ ಅವರು ಕಾಳಿಂಗ ಸರ್ಪವನ್ನು ನೀರಿನಿಂದ ಮೇಲೆತ್ತಿ ಹಿಡಿಯಲು ಹೋದಾಗ ಅದು ಏಕಾಏಕಿ ದಾಳಿ ನಡೆಸಲು ಮುಂದಾಯಿತು. ಕೂಡಲೇ ದಾಳಿಯಿಂದ ತಪ್ಪಿಸಿಕೊಂಡ ಪ್ರಭಾಕರ್‌ ಕಾಲು ಜಾರಿ ನೀರಿಗೆ ಬೀಳುತ್ತಾರೆ. ಆಗ ಮತ್ತೆ ದಾಳಿ ಮಾಡಿದ ಕಾಳಿಂಗ ಸರ್ಪವು ಪ್ರಭಾಕರ್‌ ಮುಖಕ್ಕೆ ಕಚ್ಚಲು ಮುಂದಾಯಿತು.

ಕೂಡಲೇ ಜಾಗೃತರಾದ ಪ್ರಭಾಕರ್‌ ಹಾವಿನ ತಲೆಯನ್ನು ಹಿಡಿದರು. ಇದೇ ವೇಳೆ ಅವರ ಜೊತೆಯಿದ್ದ ಸಹಾಯಕನೂ ಕೂಡಲೇ ಸರ್ಪವನ್ನು ಹಿಡಿದುಕೊಂಡರು. ಒಟ್ಟಿನಲ್ಲಿ ಸೂಕ್ತ ಸಮಯ ಪ್ರಜ್ಞೆಯಿಂದ ಸ್ನೇಕ್ ಪ್ರಭಾಕರ್ ಕೂದಲೆಳೆ ಅಂತರದಲ್ಲಿ ಕಾಳಿಂಗಸರ್ಪದ ಕಡಿತದಿಂದ ಪಾರಾಗಿದ್ದಾರೆ. ಬಳಿಕ ಸೆರೆ ಹಿಡಿದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸಮೀಪದ ಕಾಡಿಗೆ ಬಿಡಲಾಗಿದೆ.

ಈ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

Edited By : Manjunath H D
PublicNext

PublicNext

13/01/2021 09:11 pm

Cinque Terre

143.72 K

Cinque Terre

6

ಸಂಬಂಧಿತ ಸುದ್ದಿ