ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಅಥಣಿಯ ಅಪಘಾತ ಸ್ಥಳಕ್ಕೆ ಬೆಳಗಾವಿ ಎಸ್ಪಿ ಭೇಟಿ ನೀಡಿ ಪರಿಶೀಲನೆ

ಇಂದು ಬೆಳ್ಳಂಬೆಳಿಗ್ಗೆ ಅಥಣಿ ಪಟ್ಟಣದಲ್ಲಿ ಭೀಕರ ರಸ್ತೆ ಅಪಘಾತ ನಡೆದು ಪಟ್ಟಣದಲ್ಲಿ ಕೆಲವು ಹೊತ್ತು ಆತಂಕಕ್ಕೆ ಕಾರಣವಾಗಿದೆ. ಈ ಅಪಘಾತದಲ್ಲಿ ಇಬ್ಬರು ಚಾಲಕರು ಮೃತಪಟ್ಟಿದ್ದು. 15ಕ್ಕೂ ಅಧಿಕ ವಿದ್ಯಾರ್ಥಿನಿಯರು ಗಂಭೀರ ಗಾಯಗೊಂಡಿದ್ದಾರೆ. 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ರವಾನಿಸಲಾಗಿದೆ. ಈ ವೇಳೆ ಗಾಯಗೊಂಡರವನ್ನು ಪಕ್ಕದ ಮಹಾರಾಷ್ಟ್ರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅಪಘಾತದಲ್ಲಿ ರಘುನಾಥ ಅವತಾಡೆ (45) ಹಾಗೂ ಮಲೀಕಸಾಬ ಮುಜಾವರ (23) ಮೃತಪಟ್ಟ ಚಾಲಕರೆಂದು ತಿಳಿದು ಬಂದಿದೆ.

ಅಪಘಾತ ಸಂಭವಿಸಿದ ಸ್ಥಳ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ದಾಖಲಾಗಿರುವ ವಿದ್ಯಾರ್ಥಿಗಳ ಆರೋಗ್ಯವನ್ನು ಬೆಳಗಾವಿ ಎಸ್ಪಿ ಡಾ ಸಂಜೀವ ಪಾಟೀಲ್ ವಿಚಾರಿಸಿ ಮಾಧ್ಯಮಗಳ ಜೊತೆ ಮಾತನಾಡಿ, ಅಥಣಿ ಪಟ್ಟಣದಿಂದ ಕಾಲೇಜು ಕಡೆ ಬರುತ್ತಿರುವ ಬಸ್ ಹಾಗೂ ಕಾಗವಾಡ ಕಡೆಯಿಂದ ಅಥಣಿ ಕಡೆ ಬರುತ್ತಿರುವ ಗೂಡ್ಸ್ ವಾಹನಕ್ಕೆ ಅಪಘಾತ ಸಂಭವಿಸಿದೆ, ಬಣಜವಾಡ ಶಿಕ್ಷಣ ಸಂಸ್ಥೆಗೆ ಸೇರಿದ ಬಸ್ ಇದಾಗಿದ್ದು. ಈ ಬಸ್ನಲ್ಲಿ 75 ಜನರನ್ನು ಕರೆದುಕೊಂಡು ಕಾಲೇಜಿಗೆ ಹೊರಟಿರುವಾಗ ಈ ಅಪಘಾತ ಸಂಭವಿಸಿದೆ. 39 ಜನ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಓರ್ವ ಶಿಕ್ಷಕಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ವಿದ್ಯಾರ್ಥಿನಿಯರಿಗೆ ಹೆಚ್ಚಿನ ಚಿಕಿತ್ಸೆ ಬೇಕಾಗಿದೆ. ಇದರಲ್ಲಿ ಇಬ್ಬರೂ ವಾಹನ ಚಾಲಕರು ಸ್ಥಳದಲ್ಲಿ ಮೃತ ಪಟ್ಟಿದ್ದಾರೆ ಎಂದು ಬೆಳಗಾವಿ ಎಸ್ಪಿ ಡಾ ಸಂಜೀವ ಪಾಟೀಲ್ ಮಾಹಿತಿ ನೀಡಿದರು.

Edited By :
PublicNext

PublicNext

20/08/2022 07:44 pm

Cinque Terre

174.12 K

Cinque Terre

0