ಗಾಂಧಿನಗರ: ಇಂದು ಬೆಳ್ಳಂಬೆಳಿಗ್ಗೆ ಎರಡು ಟ್ರಕ್‌ಗಳು ಮುಖಾಮುಖಿ ಡಿಕ್ಕಿನ ಹೊಡೆದ ಪರಿಣಾಮ 11 ಮಂದಿ ಸಾವನ್ನಪ್ಪಿದ ಭೀಕರ ಘಟನೆ ಗುಜರಾತ್ನ ವಡೋದರದಲ್ಲಿ ನಡೆದಿದೆ. ಈ ಘಟನೆಯಲ್ಲಿ 17 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ವಡೋದರ ಹೈವೇ ರಸ್ತೆಯ ವಾಘೋಡಿಯಾ ಕ್ರಾಸಿಂಗ್ ಬಳಿ ನಸುಕಿನ ಸುಮಾರು 3 ಗಂಟೆಗೆ ಟ್ರಕ್‌ಗಳು ಡಿಕ್ಕಿ ಹೊಡೆದಿವೆ. ಟ್ರಕ್‌ನಲ್ಲಿದ್ದ ಪ್ರಯಾಣಿಕರೆಲ್ಲಾ ಸೂರತ್‌ನಿಂದ ಪಾವಗಢದ ಕಡೆಗೆ ಪ್ರಯಾಣಿಸುತ್ತಿದ್ದರು. ಗಾಯಗೊಂಡವರನ್ನು ವಡೋದರದ ಎಸ್‌ಎಸ್‌ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
PublicNext
18/11/2020 10:56 am