ಅವಸರವೇ ಅಪಘಾತಕ್ಕೆ ಕಾರಣ ಎನ್ನುವುದಕ್ಕೆ ಈ ಘಟನೆಯು ಒಂದು ಸಾಕ್ಷಿ . ಹೌದು ನಿಯಂತ್ರಣ ತಪ್ಪಿದ ಕಾರೊಂದು ಸ್ಪೀಡಾಗಿ ಬಂದು ಬಳಿಕ ಗಾಳಿಯಲ್ಲಿ ಹಾರಿ ಪ್ರಾರ್ಥನಾ ಮಂದಿರದ ಗೋಡೆಗೆ ಅಪ್ಪಳಿಸಿದ ಘಟನೆ ಆಫ್ರಿಕಾದ ಸೋಮೆರ್ ಸೆಟ್ ಬೀದಿಯಲ್ಲಿ ನಡೆದಿದೆ.
ಸಿನೀಮಿಯ ರೀತಿಯಲ್ಲಿ ನಡೆದ ಈ ಅಪಘಾತದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾರು ಹಾರುತ್ತಿದ್ದ ವೇಳೆ ಅದರಲ್ಲಿ ಬೆಂಕಿಯ ಕಿಡಿ ಕೂಡ ಹೊತ್ತಿಕೊಂಡಿದೆ.
ಆಂಡ್ರ್ಯೂಸ್ ಶಾಲೆಯ ಪ್ರಾರ್ಥನಾ ಮಂದಿರದ ಗೋಡೆಗೆ ಬಡಿಯುವ ಮೊದಲು ಕಾರು 15 ಅಡಿ ಎತ್ತರದಲ್ಲಿ ಗಾಳಿಯಲ್ಲಿ ಹಾರಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ದಕ್ಷಿಣ ಆಫ್ರಿಕಾ ಪೊಲೀಸ್ ಇಲಾಖೆ ವಕ್ತಾರ ಕ್ಯಾಪ್ಟನ್ ಮಾಲಿ ಗೋವೆಂದರ್, ನಿಯಂತ್ರಣ ತಪ್ಪಿದ ಚಾಲಕ ಕಾರನ್ನ ಪ್ರಾರ್ಥನಾ ಮಂದಿರದ ಗೋಡೆಗೆ ಬಡಿದಿದ್ದಾನೆ.
ಸ್ವಲ್ಪ ಮಿಸ್ ಆಗಿದ್ರೂ ಕಾರು ನೇರವಾಗಿ ಪ್ರಾರ್ಥನಾ ಮಂದಿರಕ್ಕೆ ಹೋಗಿ ಬೀಳುತ್ತಿತ್ತು. ಕಾರಿನ ಚಾಲಕ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಾತ್ರಿಯ ಸಮಯದಲ್ಲಿ ಜನರಿಲ್ಲದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.
PublicNext
09/11/2020 07:11 pm