ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಹೊಲದಲ್ಲಿ ಕೆಲಸ ಮಾಡೋವಾಗ ಟ್ರ್ಯಾಕ್ಟರ್ ಗೆ ಸಿಲುಕಿ ರೈತ ಸಾವು!

ಗದಗ: ಟ್ರ್ಯಾಕ್ಟರ್‌ಗೆ ಸಿಲುಕಿ ರೈತನೋರ್ವ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಮಂಜಲಾಪುರ ಗ್ರಾಮದಲ್ಲಿ ನಡೆದಿದೆ.

ರೈತ ಹೊಲದಲ್ಲಿ ಕೆಲಸ ಮಾಡುವ ವೇಳೆ ಟ್ರ್ಯಾಕ್ಟರ್ ರೂಟರ್ ಮಿಷನ್‌ಗೆ ಸಿಲುಕಿ ಸಾವನ್ನಪ್ಪಿದ್ದು, ಎರಡು ಕಾಲುಗಳು ತುಂಡಾಗಿ ಸ್ಥಳದಲ್ಲಿಯೇ ಅಸುನೀಗಿದ್ದಾನೆ. ಮಂಜಲಾಪುರ ಗ್ರಾಮದ ಬಸವರಾಜ ಮಲ್ಲೇಶಪ್ಪ ನರೇಗಲ್ (40) ಮೃತಪಟ್ಟ ರೈತ ಎಂದು ತಿಳಿದು ಬಂದಿದೆ.

ಇನ್ನೂ ಬಸವರಾಜ ಹೊಲದಲ್ಲಿ ರೂಟರ್ ಮತ್ತು ಟ್ರ್ಯಾಕ್ಟರ್ ಸ್ಟಾರ್ಟ್ ಇಟ್ಟುಕೊಂಡು ರೂಟರ್ ಮಿಷನ್‌ನಲ್ಲಿ ಸಿಲುಕಿಕೊಂಡ ಕಸತೆಗೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಎರಡೂ ಬೇಡುಗಳಿಗೆ ಸಿಲುಕಿ ತುಂಡಾಗಿದ್ದಾನೆ. ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ತುಂಡಾಗಿ ಬಿದ್ದ ದೇಹ ವೀಕ್ಷಿಸಿದ ಸಾರ್ವಜನಿಕರು ಖೇದ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ತಹಶೀಲ್ದಾರ ಪರಶುರಾಮ ಸತ್ತಿಗೇರಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು, ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
PublicNext

PublicNext

18/05/2022 11:55 am

Cinque Terre

55.68 K

Cinque Terre

2

ಸಂಬಂಧಿತ ಸುದ್ದಿ