ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎರಡು ವಾಹನಗಳ ಮಧ್ಯೆ ಡಿಕ್ಕಿ : ನಾಲ್ವರು ಸಜೀವ ದಹನ

ಹೈದರಾಬಾದ್ : ಅವಸರವೇ ಅಪಘಾತಕ್ಕೆ ಕಾರಣ ಎನ್ನುವಂತೆ ಇಲ್ಲಿ ಟಾಟಾ ಸುಮೊ, ಟಿಪ್ಪರ್, ಲಾರಿ ನಡುವೆ ಡಿಕ್ಕಿ ಸಂಭವಿಸಿ ನಾಲ್ವರು ಸಜೀವ ದಹನವಾಗಿರುವ ಅಪಘಾತ ಆಂಧ್ರಪ್ರದೇಶದ ಕಡಪ ಜಿಲ್ಲೆ ವಲ್ಲೂರು ತಾಲೂಕಿನ ಗೋಟೂರು ಬಳಿ ಸಂಭವಿಸಿದೆ.

ಟಿಪ್ಪರ್ ಲಾರಿ ಡಿಕ್ಕಿ ರಭಸಕ್ಕೆ ಟಾಟಾ ಸುಮೊ ಡೀಸೆಲ್ ಟ್ಯಾಂಕ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡು ಈ ದುರಂತ ಸಂಭವಿಸಿದೆ.

ಘಟನೆಯಲ್ಲಿ ಟಾಟಾ ಸುಮೊದಲ್ಲಿದ್ದ ನಾಲ್ವರು ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ.

ಇನ್ನು ಮೂವರಿಗೆ ಗಂಭೀರ ಗಾಯಗಳಾಗಿದ್ದು ಕಡಪ ರಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರು ತಮಿಳು ನಾಡಿನವರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಕಡಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Nagesh Gaonkar
PublicNext

PublicNext

02/11/2020 07:46 am

Cinque Terre

71.59 K

Cinque Terre

8

ಸಂಬಂಧಿತ ಸುದ್ದಿ