ವಿಜಯಪುರ : ಜಗತ್ತಿಗೆ ಪರಿಚಯಿಸಿದ ತಾಯಿ ತನ್ನ ಮಗುವಿನ ಸರ್ವಸ್ವದಲ್ಲಿಯೂ ಜೊತೆಯಾಗಿರುತ್ತಾಳೆಅದು ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ.
ಸದ್ಯ ಎಲ್ಲರೂ ಹಬ್ಬದ ಸಂಭ್ರಮದಲ್ಲಿರುವಾಗ ವಿಜಯಪುರದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.
ಮಗನ ಪ್ರಾಣ ಉಳಿಸಲು ಹೋದ ತಾಯಿ ಕೂಡ ಮಗನೊಂದಿಗೆ ನೀರುಪಾಲಾಗಿದ್ದಾರೆ.
ನಿಡಗುಂದಿಯ ನಿವಾಸಿಗಳಾದ ಅಂಜನಾ ಕೊಂಚಿಕೊರವರ(28) ಮತ್ತು ಇವರ ಪುತ್ರ ನಾಗೇಶ(8) ಮೃತ ದುರ್ದೈವಿಗಳು.
ತಾಯಿ-ಮಗನ ಸಾವಿಗೆ ನಿಡಗುಂದಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ನಿಡಗುಂದಿ ತಾಂಡಾ ಬಳಿ ಇರುವ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ಸೋಮವಾರ ಮಧ್ಯಾಹ್ನ ಬಟ್ಟೆ ತೊಳೆಯಲು ಅಂಜನಾ ಬಂದಿದ್ದರು.
ತಾಯಿ ಜತೆಗೆ ಬಂದ ಮಗ ಆಕಸ್ಮಿಕವಾಗಿ ಕಾಲುವೆಗೆ ಬಿದ್ದ ಮಗನನ್ನು ರಕ್ಷಿಸಲು ಹೋದ ತಾಯಿ ಕೂಡ ಜಲಸಮಾಧಿಯಾದರು.
ತಾಯಿ ಮತ್ತು ಮಗನ ಶವವನ್ನು ಸ್ಥಳೀಯರು ಹೊರ ತೆಗೆದಿದ್ದಾರೆ.
ನಿಡಗುಂದಿ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ನಡೆದಿದೆ.
PublicNext
26/10/2020 08:49 pm