", "articleSection": "Politics,Government,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1739366673-A7~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SuryaMysore" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೈಸೂರು : ಮೈಸೂರಿನ ಉದಯಗಿರಿಯಲ್ಲಿ ಗಲಾಟೆ ವಿಚಾರವಾಗಿ ಮೈಸೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಯಾರು ಏನು ಹೇಳಿದರು...Read more" } ", "keywords": "Mysuru police station attack, Karnataka crime news, police station vandalism, unknown assailants, investigation underway, Mysuru law and order, Indian police security, crime in Karnataka, Mysuru news.,,Politics,Government,News,Public-News", "url": "https://publicnext.com/node" } ಮೈಸೂರು : ಪೊಲೀಸ್ ಠಾಣೆ ಮೇಲೆ ದಾಳಿ - ಯಾರೇ ಮಾಡಿದ್ರು ಕಠಿಣ ಕ್ರಮ.!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು : ಪೊಲೀಸ್ ಠಾಣೆ ಮೇಲೆ ದಾಳಿ - ಯಾರೇ ಮಾಡಿದ್ರು ಕಠಿಣ ಕ್ರಮ.!

ಮೈಸೂರು : ಮೈಸೂರಿನ ಉದಯಗಿರಿಯಲ್ಲಿ ಗಲಾಟೆ ವಿಚಾರವಾಗಿ ಮೈಸೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಯಾರು ಏನು ಹೇಳಿದರು ಎಂಬುದು ಮುಖ್ಯವಲ್ಲ. ನಾನು ಡಿಸಿಎಂ ಆಗಿ ಹೇಳುತ್ತಿದ್ದೇನೆ. ಪೊಲೀಸರದ್ದು ಯಾವ ತಪ್ಪು ಇಲ್ಲ, ಪೊಲೀಸರು ಸರಿಯಾಗಿಯೇ ಕೆಲಸ ಮಾಡಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಪೊಲೀಸರು ಗಾಯಗೊಂಡರು ಕೂಡ ಸಮಯ ಪ್ರಜ್ಞೆಯಿಂದ ಕೆಲಸ ಮಾಡಿದ್ದಾರೆ. ನಾನು ನಮ್ಮ ಪೊಲೀಸರ ಪರವಾಗಿಯೇ ಇದ್ದೇನೆ ಎಂದಿದ್ದಾರೆ.

ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಯಾರು ಏನು ಹೇಳಿದರು ಎಂಬುದು ಮುಖ್ಯವಲ್ಲ‌.ಸಚಿವ ರಾಜಣ್ಣ ಅವರು ಈ ವಿಚಾರದಲ್ಲಿ ಹೇಳಿರುವ ಮಾತಿಗೆ ಸಿಎಂ ಉತ್ತರ ಕೊಡುತ್ತಾರೆ‌. ಸಿಎಂಗೆ ಸದ್ಯಕ್ಕೆ ಮಾತನಾಡಲು ಆಗುತ್ತಿಲ್ಲ. 8 ರಿಂದ 10ರಲ್ಲಿ ಅವರೇ ಮಾತನಾಡುತ್ತಾರೆ. ನಾನು ಮೈಸೂರಿನ ನೆಲದಲ್ಲಿ ನಿಂತು ಹೇಳುತ್ತಿದ್ದೇನೆ. ನಮ್ಮ ಪೊಲೀಸರದ್ದು ಯಾವ ತಪ್ಪು ಇಲ್ಲ. ಕಲ್ಲು ಎಸೆದಿರುವವರು ಎಲ್ಲ 14, 15ನೇ ವಯಸ್ಸಿನ ಮುಸ್ಲಿಂ ಯುವಕರು. ಧಾರ್ಮಿಕ ಮುಖಂಡರ ಮಾತನ್ನೂ ಅವರ ಕೇಳಿಲ್ಲ. ಪಾಪ ಹಿರಿಯರು, ಮುಖಂಡರೂ ಸೇರಿ ಗಲಭೆ ಕಂಟ್ರೋಲ್ ಮಾಡಿದ್ದಾರೆ. ಪೊಲೀಸರಿಗಾದರೆ ಪ್ರೊಟೆಕ್ಷನ್ ಇತ್ತು. ಪಾಪ ಅಲ್ಲಿದ್ದ ಸಾರ್ವಜನಿಕರಿಗೆ ಅದೂ ಇರಲಿಲ್ಲ. ಗಲಭೆ ಮಾಡಿದವರ ಪತ್ತೆ ಮಾಡುವ ಕೆಲಸವನ್ನ ಪೊಲೀಸರು ಮಾಡುತ್ತಿದ್ದಾರೆ ಎಂದಿದ್ದಾರೆ.

Edited By : Suman K
PublicNext

PublicNext

12/02/2025 06:56 pm

Cinque Terre

27.93 K

Cinque Terre

5

ಸಂಬಂಧಿತ ಸುದ್ದಿ