ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಫೋನ್‌ನಿಂದ ಬರ್ತ್‌ಡೇ ಕೇಕ್ ಕತ್ತರಿಸಿದ ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಫೆಬ್ರವರಿ 9 ರಂದು ಐಫೋನ್ ಬಳಸಿ ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ವಿಡಿಯೋದಲ್ಲಿ ಶಿಂಧೆ ತಮ್ಮ ಬೆಂಬಲಿಗರು ತಂದಿದ್ದ ದೊಡ್ಡ ಹುಟ್ಟುಹಬ್ಬದ ಕೇಕ್ ಅನ್ನು ಐಫೋನ್ ಬಳಸಿ ಕತ್ತರಿಸುತ್ತಿರುವುದನ್ನು ಕಾಣಬಹುದಾಗಿದೆ. ಅವರ ಕಿರೀಟಧಾರಿತ ಫೋಟೋದ ಕಟೌಟ್ ಅನ್ನು ಒಳಗೊಂಡ ಮತ್ತೊಂದು ಕೇಕ್ ಅನ್ನು ಸಹ ಒಂದು ಬದಿಯಲ್ಲಿ ಇರಿಸಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶಿವಸೇನಾ ನಾಯಕ ಶಿಂಧೆ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದು, ಮಹಾರಾಷ್ಟ್ರದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ "ಕ್ರಿಯಾತ್ಮಕ ತಳಮಟ್ಟದ ನಾಯಕ" ಎಂದು ಬನ್ನಿಸಿದ್ದಾರೆ.

Edited By : Vijay Kumar
PublicNext

PublicNext

11/02/2025 10:33 pm

Cinque Terre

20.13 K

Cinque Terre

2