ಬೆಂಗಳೂರು: ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆ ಮುಂದೂಡಿಕೆಯಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇದೇ ತಿಂಗಳು ಫೆಬ್ರವರಿ 17 ಕ್ಕೆ ಮಲೆಮಹದೇಶ್ಚರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ಆದ್ರೆ ಸಿಎಂ ಸಿದ್ದರಾಮಯ್ಯಗೆ ಮಂಡಿ ನೋವು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಫೆಬ್ರವರಿ 17ರಂದು ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನ ಮುಂದೂಡಲಾಗಿದೆ ಎಂಬ ಮಾಹಿತಿ ಬಂದಿದೆ.
ಸಿಎಂಗೆ ಮಂಡಿ ನೋವಿನಿಂದಾಗಿ ಕಳೆದ ಒಂದುವಾರದಿಂದ ಎಲ್ಲಿಯೋ ಹೊರಗಡೆ ಹೊಗಿರಲಿಲ್ಲ . ಬಜೆಟ್ ಪೂರ್ವ ಭಾವಿ ಸಭೆಯನ್ನ ಸಹ ತಮ್ಮ ಸರ್ಕಾರಿ ನಿವಾಸ ಕಾವೇರಿಯಲ್ಲಿ ಮಾಡಿದ್ದರು. ಅಲ್ದೇ ಮಂಡಿ ನೋವಿನಿಂದ ತಮ್ಮ ಆಪ್ತ ಸಚಿವ ಬೈರತಿ ಸುರೇಶ್ ಮಗನ ಮದುವೆಗೂ ಸಹ ತೆರಳಿರಲಿಲ್ಲ.
ಈಗ ಮಂಡಿನೋವು ಸ್ವಲ್ಪ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಇಂದು ಆರಂಭಗೊಳ್ಳಲಿರುವ ಜಿಮ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ ಎನ್ನಲಾಗಿದೆ. ಆದ್ರೆ ಸಧ್ಯಕ್ಕೆ ಪ್ರಯಾಣ ಮಾಡೋದು ಬೇಡ ಎಂದು ವೈದ್ಯರು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನ ಸಧ್ಯಕ್ಕೆ ಮುಂದೂಡಿಕೆ ಮಾಡಲಾಗಿದೆ. ಆದ್ರೆ ಅದೇ ಸಚಿವ ಸಂಪುಟ ಸಭೆಯನ್ನ ವಿಧಾನಸೌಧದಲ್ಲೇ ನಡೆಸುವ ಸಾಧ್ಯತೆ ಇದೆ.
PublicNext
11/02/2025 04:12 pm