", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/387839-1739203672-WhatsApp-Image-2025-02-10-at-9.32.44-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ. ಸಂದೀಪ್ ಆಯ್ಕೆಗೆ ಬಿಜೆಪಿ ಹೈಕಮಾಂಡ್ ತಡೆ ನೀಡಿದೆ. ವಿಜಯೇಂದ್ರಗೆ ಪತ್ರ ಬರೆದು ಚಿಕ...Read more" } ", "keywords": "The BJP high command has blocked the appointment of Sandeep as the Chikkaballapur district BJP president. This decision comes as a significant development within the Karnataka BJP, highlighting the party's internal dynamics ¹.,Bangalore,Chikkaballapur,Politics", "url": "https://publicnext.com/node" } ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂದೀಪ್ ಆಯ್ಕೆಗೆ ತಡೆ ನೀಡಿದ ಬಿಜೆಪಿ ಹೈಕಮಾಂಡ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂದೀಪ್ ಆಯ್ಕೆಗೆ ತಡೆ ನೀಡಿದ ಬಿಜೆಪಿ ಹೈಕಮಾಂಡ್

ಬೆಂಗಳೂರು : ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ. ಸಂದೀಪ್ ಆಯ್ಕೆಗೆ ಬಿಜೆಪಿ ಹೈಕಮಾಂಡ್ ತಡೆ ನೀಡಿದೆ. ವಿಜಯೇಂದ್ರಗೆ ಪತ್ರ ಬರೆದು ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ಆಯ್ಕೆಗೆ ತಡೆ ನೀಡುವಂತೆ ಹೈಕಮಾಂಡ್ ಸೂಚನೆ ನೀಡಿದೆ.

ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ರಿಂದ ವಿಜಯೇಂದ್ರಗೆ ಸೂಚನೆ ನೀಡಲಾಗಿದೆ.

ಸಂದೀಪ್ ಆಯ್ಕೆ ಚಿಕ್ಕಬಳ್ಳಾಪುರ ಸಂಸದ ಸುಧಾಕರ್ ತೀವ್ರ ವಿರೋಧ ವ್ಯಕ್ತಪಡಿಸಿದರು ಬಹಿರಂಗವಾಗಿ ವಿಜಯೇಂದ್ರ ವಿರುದ್ಧ ಅಸಮಾಧಾನ ಹೊರಹಾಕಿದ್ರು. ಇದೀಗ ಹೈಕಮಾಂಡ್ ಸಂದೀಪ್ ಆಯ್ಕೆಗೆ ತಡೆ ಹಿಡಿದ ಹಿನ್ನೆಲೆಯಲ್ಲಿ ವಿಜಯೇಂದ್ರಗೆ ಹಿನ್ನಡೆಯಾಗಿದೆ.

ಇನ್ನೂ ಹೊಸದಾಗಿ ಆಯ್ಕೆಯಾದ ಸಂದೀಪ್ ಅಧ್ಯಕ್ಷರಾಗಿ ಕೆಲಸ ಮಾಡುವಂತಿಲ್ಲ,ರಾಜ್ಯ ಬಿಜೆಪಿ ಅಧ್ಯಕ್ಷರ ಚುನಾವಣೆಯಲ್ಲಿ ಮತ ಚಲಾಯಿಸಲು ಅನುಮತಿ ನೀಡುವುದಿಲ್ಲ ಎಂದು ಹೈಕಮಾಂಡ್ ರವಾನಿಸಿದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಒಂದು ಕಡೆ ಹೈಕಮಾಂಡ್ ಯತ್ನಾಳ್ ಗೆ ನೋಟಿಸ್ ಕೊಟ್ಟು ವಿಜಯೇಂದ್ರ ಪರ ಇದೆ ಅನ್ನುವಷ್ಟರಲ್ಲೇ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಸಂದೀಪ್ ಆಯ್ಕೆ ತಡೆ ಹಿಡಿಯುವ ಮೂಲಕ ವಿಜಯೇಂದ್ರ ಪರವೂ ಇಲ್ಲ, ಅನ್ನೋ ಸಂದೇಶ ರವಾನಿಸಿದೆ. ಎಲ್ಲೋ ಒಂದು ಕಡೆ ಬಣಗಳ ನಡುವೆ ಬ್ಯಾಲೆನ್ಸ್ ಮಾಡಲು ಹೈಕಮಾಂಡ್ ಮುಂದಾಗಿತ್ತಾ ಎನ್ನಲಾಗುತ್ತಿದೆ.

Edited By : Abhishek Kamoji
PublicNext

PublicNext

10/02/2025 09:38 pm

Cinque Terre

10.34 K

Cinque Terre

0

ಸಂಬಂಧಿತ ಸುದ್ದಿ