", "articleSection": "Crime,Law and Order,Viral", "image": { "@type": "ImageObject", "url": "https://prod.cdn.publicnext.com/s3fs-public/387839-1739187458-WhatsApp-Image-2025-02-10-at-5.06.32-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗುಜರಾತ್‌: ಸರ್ಕಾರಿ ಶಾಲೆಯೊಂದರಲ್ಲಿ ಮೀಟಿಂಗ್ ಮಾಡುತ್ತಾ ಕುಳಿತಿದ್ದ ವೇಳೆ ಪ್ರಿನ್ಸಿಪಾಲರು ಸಹ ಶಿಕ್ಷಕರ ಮೇಲೆ ಸಿಟ್ಟಿಗೆದ್ದು, ಒಂದೇ ನಿಮಿಷದಲ...Read more" } ", "keywords": "Principal Beats Teacher, Teacher Assaulted, School Violence, Viral Video, Education Department Probe, Teacher Abuse, School Safety, Karnataka Education. ,,Crime,Law-and-Order,Viral", "url": "https://publicnext.com/node" } Watch : ಪ್ರಿನ್ಸಿಪಾಲ್‌ನಿಂದ ಶಿಕ್ಷಕನಿಗೆ 18 ಬಾರಿ ಕಪಾಳಮೋಕ್ಷ - ವಿಡಿಯೋ ವೈರಲ್ ಬೆನ್ನಲ್ಲೆ ತನಿಖೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Watch : ಪ್ರಿನ್ಸಿಪಾಲ್‌ನಿಂದ ಶಿಕ್ಷಕನಿಗೆ 18 ಬಾರಿ ಕಪಾಳಮೋಕ್ಷ - ವಿಡಿಯೋ ವೈರಲ್ ಬೆನ್ನಲ್ಲೆ ತನಿಖೆ

ಗುಜರಾತ್‌: ಸರ್ಕಾರಿ ಶಾಲೆಯೊಂದರಲ್ಲಿ ಮೀಟಿಂಗ್ ಮಾಡುತ್ತಾ ಕುಳಿತಿದ್ದ ವೇಳೆ ಪ್ರಿನ್ಸಿಪಾಲರು ಸಹ ಶಿಕ್ಷಕರ ಮೇಲೆ ಸಿಟ್ಟಿಗೆದ್ದು, ಒಂದೇ ನಿಮಿಷದಲ್ಲಿ ಬರೋಬ್ಬರಿ 18 ಬಾರಿ ಹೊಡೆದಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೇ ಈ ವಿಡಿಯೋ ಇದೀಗ ಶಿಕ್ಷಣ ಇಲಾಖೆಯಲ್ಲಿ ವೈರಲ್ ಆಗಿದ್ದು, ತನಿಖೆಗೆ ಆದೇಶ ಹೊರಡಿಸಲಾಗಿದೆ.

ಈ ಘಟನೆ ಗುಜರಾತ್‌ನ ಭರೂಚ್‌ನಲ್ಲಿ ನಡೆದಿದೆ. ವರದಿಗಳ ಪ್ರಕಾರ, ಶಿಕ್ಷಕ ರಾಜೇಂದ್ರ ಪರ್ಮಾರ್ ಅವರ ಗಣಿತ ಮತ್ತು ವಿಜ್ಞಾನ ಬೋಧನಾ ಶೈಲಿಯ ಬಗ್ಗೆ ದೂರುಗಳಿದ್ದವು. ಪ್ರಿನ್ಸಿಪಾಲ್ ಹಿತೇಂದ್ರ ಸಿಂಗ್ ಠಾಕೂರ್, ಪರ್ಮಾರ್ ಅವರನ್ನು ದುರ್ವರ್ತನೆ ಮತ್ತು ತರಗತಿಯಲ್ಲಿ ಅವಾಚ್ಯ ಶಬ್ದಗಳ ಬಳಕೆ ಆರೋಪಿಸಿದ್ದಾರೆ. ಪರ್ಮಾರ್, ಪ್ರಿನ್ಸಿಪಾಲ್ ಕೋಪದಿಂದ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಶಿಕ್ಷಕ ಪರ್ಮಾರ್ ಅವರು ವಿದ್ಯಾರ್ಥಿಗಳಿಂದ ಕಾಲು ಒತ್ತಿಸಿಕೊಳ್ಳುತ್ತಿದ್ದರು ಎಂದು ಆರೋಪ ಮಾಡಿದ್ದಾರೆ ಪ್ರಾಚಾರ್ಯ ಠಾಕೂರ್ ಅವರು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಶಿಕ್ಷಕ ಪರ್ಮಾರ್ ಮಾತ್ರ ನಾನು ಹಾಗೇ ಮಾಡುವುದು ಏನಿವಾಗ ಎಂಬಂತೆ ದುರ್ವರ್ತನೆ ತೋರಿದ್ದಾರೆ.

ಈ ಘಟನೆಯ ನಂತರ ಸಹ ಶಿಕ್ಷಕರು ಮೇಲಿನ ಅಧಿಕಾರಿಗಳಿಗೆ ಪ್ರಾಚಾರ್ಯರು ಹಲ್ಲೆ ಮಾಡಿದ್ದಾರೆಂದು ದೂರು ಕೊಟ್ಟಿದ್ದಾರೆ. ಜೊತೆಗೆ, ಪೊಲೀಸ್ ಠಾಣೆ ಮೆಟ್ಟಿಲೇರಲೂ ಮುಂದಾಗಿದ್ದಾರೆ.

ಇದೀಗ ಶಿಕ್ಷಕರ ಹೊಡೆದಾಟದ ವಿಡಿಯೋ ವೈರಲ್ ಆಗಿದೆ. ನಂತರ, ಜಿಲ್ಲಾ ಶಿಕ್ಷಣಾಧಿಕಾರಿ ಸ್ವಾತಿಬಾ ರೌಲ್ ಅವರು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

Edited By : Abhishek Kamoji
PublicNext

PublicNext

10/02/2025 05:07 pm

Cinque Terre

25.11 K

Cinque Terre

0