", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/387839-1739076753-Untitled-design---2025-02-09T102227.467.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "HarishAnekal" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಸುವರ್ಣಮುಖಿ ಕಲ್ಯಾಣಿಯಲ್ಲಿ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ಸ್ನೇಹಿತರ ಕಣ್ಮುಂದೆಯೇ ನೀರು ಪಾಲಾಗಿರುವಘಟನೆ ಬನ್ನೇರುಘಟ್ಟದಲ...Read more" } ", "keywords": "Bangalore Drowning Incident, Students Drown in Pool, Swimming Pool Tragedy, Bengaluru Swimming Accident, Drowning Death, Pool Safety, Student Deaths, Bangalore Swimming Pool Incident ,Bangalore,Bangalore-Rural,Accident", "url": "https://publicnext.com/node" } ಬೆಂಗಳೂರು: ಈಜಲು ಹೋಗಿ ದುರಂತ- ಸ್ನೇಹಿತರ ಕಣ್ಣೆದುರಲ್ಲೇ ನೀರು ಪಾಲದ ಇಬ್ಬರು ವಿದ್ಯಾರ್ಥಿಗಳು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಈಜಲು ಹೋಗಿ ದುರಂತ- ಸ್ನೇಹಿತರ ಕಣ್ಣೆದುರಲ್ಲೇ ನೀರು ಪಾಲದ ಇಬ್ಬರು ವಿದ್ಯಾರ್ಥಿಗಳು

ಬೆಂಗಳೂರು: ಸುವರ್ಣಮುಖಿ ಕಲ್ಯಾಣಿಯಲ್ಲಿ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ಸ್ನೇಹಿತರ ಕಣ್ಮುಂದೆಯೇ ನೀರು ಪಾಲಾಗಿರುವಘಟನೆ ಬನ್ನೇರುಘಟ್ಟದಲ್ಲಿ ನಡೆದಿದೆ.

ಬೊಮ್ಮಸಂದ್ರದ ಎಸ್ ಎಫ್ ಎಸ್ ಕಾಲೇಜಿನ ಐವರು ವಿದ್ಯಾರ್ಥಿಗಳು ಬನ್ನೇರುಘಟ್ಟ ಸಮೀಪದ ಸುವರ್ಣಮುಖಿ ಕಲ್ಯಾಣಿಗೆ ಬಂದಿದ್ದರು. ಈ ವೇಳೆ ಇಬ್ಬರು ವಿದ್ಯಾರ್ಥಿಗಳು ಈಜಲು ಕಲ್ಯಾಣಿಗೆ ಇಳಿದಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ.

ಗಾರ್ವೆಬಾವಿ ಪಾಳ್ಯದ ದೀಪು (20) ಹಾಗೂ ಯೋಗೀಶ್ವರ್(20) ಮೃತರು. ಇಬ್ಬರು ಸ್ನೇಹಿತರು ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಿರುವ ದೃಶ್ಯ ದಡದಲ್ಲಿ ನಿಂತಿದ್ದ ವಿದ್ಯಾರ್ಥಿಯೋರ್ವನ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ನೀರಿನಲ್ಲಿ ಈಜಲಾಗದೇ ಇಬ್ಬರೂ ಪರದಾಡಿದ್ದಾರೆ.

ದಡದಲ್ಲಿದ್ದ ಮೂವರಿಗೆ ಅವರನ್ನು ರಕ್ಷಣೆ ಮಾಡಲು ಸಾಧ್ಯವಾಗದೇ ಕಂಗಾಲಾಗಿದ್ದಾರೆ. ಇಬ್ಬರು ಸ್ನೇಹಿತರ ಕಣ್ಮುಂದೆಯೇ ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟಿದ್ದಾರೆ.

ಅಪಾಯದಿಂದ ಪಾರಾದ ಮೂವರು ವಿದ್ಯಾರ್ಥಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬನ್ನೇರುಘಟ್ಟ ಪೊಲೀಸರು, ಅಗ್ನಿಶಾಮಕ ದಳ ಮತ್ತು ಈಜು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಮೃತದೇಹ ಹೊರಕ್ಕೆ ತೆಗೆದರು. ರಾತ್ರಿಯಾದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

ಇಂದು ಮುಂಜಾನೆ ಕಾರ್ಯಾಚರಣೆ ನಡೆ ಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಬನ್ನೇರ್ಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Edited By : Abhishek Kamoji
PublicNext

PublicNext

09/02/2025 10:23 am

Cinque Terre

16.11 K

Cinque Terre

0