", "articleSection": "Politics,Religion", "image": { "@type": "ImageObject", "url": "https://prod.cdn.publicnext.com/s3fs-public/387839-1739069505-Untitled-design---2025-02-09T082140.188.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವದೆಹಲಿ : ಬಿಜೆಪಿಯ ಪರ್ವೇಶ್ ವರ್ಮಾ ಎರಡೆರಡು ಬಾರಿ ರಾಷ್ಟ್ರೀಯ ಚುನಾವಣೆಗಳನ್ನು ಗೆದ್ದಿದ್ದಾರೆ. 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ...Read more" } ", "keywords": "KCR, K Chandrashekar Rao, Telangana CM, Varma, Telangana Politics, TRS, BJP, Telangana Elections, KCR Victory, Jay Shree Ram Post ,,Politics,Religion", "url": "https://publicnext.com/node" } ಕೇಜ್ರಿವಾಲ್​ನ್ನು ನೆಲಕ್ಕೆ ಕೆಡವಿದ 'ವರ್ಮಾ'ಗೆ ದೈತ್ಯ ವಿಜಯಿ ಎಂಬ ಹೆಸರು : ಗೆದ್ದ ಬಳಿಕ 'ಜೈ ಶ್ರೀರಾಮ' ಎಂದು ಪೋಸ್ಟ್‌!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇಜ್ರಿವಾಲ್​ನ್ನು ನೆಲಕ್ಕೆ ಕೆಡವಿದ 'ವರ್ಮಾ'ಗೆ ದೈತ್ಯ ವಿಜಯಿ ಎಂಬ ಹೆಸರು : ಗೆದ್ದ ಬಳಿಕ 'ಜೈ ಶ್ರೀರಾಮ' ಎಂದು ಪೋಸ್ಟ್‌!

ನವದೆಹಲಿ : ಬಿಜೆಪಿಯ ಪರ್ವೇಶ್ ವರ್ಮಾ ಎರಡೆರಡು ಬಾರಿ ರಾಷ್ಟ್ರೀಯ ಚುನಾವಣೆಗಳನ್ನು ಗೆದ್ದಿದ್ದಾರೆ. 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ ಪರ್ವೇಶ್ 2025ರಲ್ಲಿ ಹೊಸ ಬಿರುಗಾಳಿಯನ್ನೇ ದೆಹಲಿಯಲ್ಲಿ ಸೃಷ್ಟಿಸಿದರು.

ಕಳೆದ ಒಂದು ದಶಕದಿಂದ ದೆಹಲಿಯನ್ನಾಳುತ್ತಿದ್ದ ಮಾಜಿ ಸಿಎಂ ಕೇಜ್ರಿವಾಲ್ ಅವರನ್ನ ಅವರದ್ದೇ ಅಖಾಡದಲ್ಲಿ ಸೋಲಿಸಿ ಮಣ್ಣು ಮುಕ್ಕಿಸಿ ಜನರಿಂದ ದೈತ್ಯ ವಿಜಯಿ, ದೈತ್ಯ ಭಂಜಕ ಎಂಬ ಹೆಸರನ್ನೆಲ್ಲಾ ಪಡೆಯುತ್ತಿದ್ದಾರೆ. ಈ ಮೂಲಕ ದೆಹಲಿಯ ಸಿಎಂ ನಾನೇ ಎಂಬ ಸೂಚನೆಯನ್ನು ಕೂಡ ನೀಡುತ್ತಿದ್ದಾರೆ.

ವರ್ಮಾ ಸಾಧನೆಗಳಿಗಿಂತ ವಿವಾದಗಳಿಗೆ ಹೆಚ್ಚು ಖ್ಯಾತಿ ಪಡೆದವರು. ಈ ಬಾರಿ ನವದೆಹಲಿಯ ಚುನಾವಣೆಯಲ್ಲಿ ಕೇಜ್ರಿವಾಲ್​ರನ್ನು 4000ಕ್ಕೂ ಅಧಿಕ ವೋಟುಗಳಿಂದ ಸೋಲಿಸಿ ಹೊಸ ಇತಿಹಾಸ ಬರೆದಿದ್ದಾರೆ. ಪ್ರಧಾನಿ ಮೋದಿ ಹಾಗೂ ನಮ್ಮ ಪಕ್ಷ ಸೇರಿ ದೆಹಲಿಗೆ ಹೊಸ ಆಕಾರವನ್ನು ನೀಡಲಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ಚುನಾವಣೆಯಲ್ಲಿ ತಾವು ಗೆದ್ದ ಬಳಿಕ ತಮ್ಮ ಎಕ್ಸ್ ಖಾತೆಯಲ್ಲಿ ಜೈ ಶ್ರೀರಾಮ ಎಂದು ಬರೆದುಕೊಂಡಿದ್ದಾರೆ ಪರ್ವೇಶ್ ವರ್ಮಾ. ಒಂದು ಮೂಲಗಳ ಪ್ರಕಾರ ದೆಹಲಿಯ ಬಿಜೆಪಿ ಸಿಎಂ ಆಗಿ ಅಧಿಕಾರವಹಿಸಿಕೊಳ್ಳೋದು ಬಹುತೇಕ ಫಿಕ್ಸ್ ಎನ್ನಲಾಗುತ್ತಿದೆ.

ದೆಹಲಿಯಲ್ಲಿ ವಿಜಯೋತ್ಸವದ ಬಳಿಕ ಮಾತನಾಡಿದ ಪರ್ವೇಶ್ ವರ್ಮಾ, ಕಳೆದ 10 ವರ್ಷಗಳಿಂದ ದೆಹಲಿಯಲ್ಲಿ ಯಾವುದೇ ಕೆಲಸ ಆಗಿರಲಿಲ್ಲ. ನಾನು ದೆಹಲಿ ಜನರಿಗೆ ಧನ್ಯವಾದ ಅರ್ಪಿಸುತ್ತೇನೆ. ಪ್ರಧಾನಿ ಮೋದಿಯವರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.

ಇನ್ನು ಕೆಲವೇ ದಿನಗಳಲ್ಲಿ ಸ್ಥಳೀಯ ನಾಯಕರು ಕಾರ್ಯಕರ್ತರು ಹಾಗೂ ಶಾಸಕರೊಂದಿಗೆ ಮಾತುಕತೆ ನಡೆಸಿ ಸಿಎಂ ಆಯ್ಕೆಯನ್ನು ಮಾಡಲಿದ್ದಾರೆ ಬಿಜೆಪಿ ವರಿಷ್ಠರು.

Edited By : Abhishek Kamoji
PublicNext

PublicNext

09/02/2025 08:21 am

Cinque Terre

6.04 K

Cinque Terre

1

ಸಂಬಂಧಿತ ಸುದ್ದಿ