", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/235762-1739026599-Untitled-design---2025-02-08T202632.810.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೆಂಗಳೂರು: ಸಾರಿಗೆ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಿದ್ದರಿಂದ ಆಗುತ್ತಿರುವ ನಷ್ಟವನ್ನು ನಿಭಾಯಿಸಿಕೊಳ್ಳಲು ರಾಜ್ಯ ಸರಕಾರ ...Read more" } ", "keywords": "KSRTC loss, Supreme Court verdict, transportation company, government guarantee, financial setback, Karnataka State Road Transport Corporation, Indian transportation, court ruling, financial impact. ,,Politics", "url": "https://publicnext.com/node" }
ಬೆಂಗಳೂರು: ಸಾರಿಗೆ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಿದ್ದರಿಂದ ಆಗುತ್ತಿರುವ ನಷ್ಟವನ್ನು ನಿಭಾಯಿಸಿಕೊಳ್ಳಲು ರಾಜ್ಯ ಸರಕಾರ ಹೆಣಗಾಡುತ್ತಿದೆ. ಏಕಾಏಕಿ ಬಸ್ ಪ್ರಯಾಣ ದರ ಹೆಚ್ಚಳ ಮಾಡಿದೆ. ದೂರದ ಊರುಗಳಿಗೆ ಹೋಗುವ ರಾಜಹಂಸ, ಸ್ಲೀಪರ್ ಕೋಚ್ ಬಸ್ಗಳಿಗೆ ಒಂದೂವರೆ ಪಟ್ಟು ರೇಟ್ ಆಗಿದೆ. ಕೆಲವು ಊರುಗಳಿಗೆ ಇದ್ದ ರಾಜಹಂಸ ಬಸ್ ಅನ್ನು ರದ್ದು ಮಾಡಿ, ಸ್ಲೀಪರ್ ಕೋಚ್ ಹಾಕುವ ಮೂಲಕ, ಈ ಹೆಚ್ಚುವರಿ ಹಣ ತೆರಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇಂತಹ ಮಾರ್ಗದಲ್ಲಿ ಸರಕಾರ ಸಾರಿಗೆ ವಿಚಾರದಲ್ಲಿ ಆಗುತ್ತಿರುವ ನಷ್ಟವನ್ನು ಸರಿದೂಗಿಸುತ್ತಿದೆ.
ಇದಾಗಲೇ, ಕೆಎಸ್ಆರ್ಟಿಸಿ ಬಸ್ ದರಕ್ಕೆ ಪೈಪೋಟಿ ನೀಡುತ್ತಿರುವ ಕೆಲವು ಖಾಸಗಿ ಬಸ್ಗಳು, ಅದಕ್ಕಿಂತ ಕಡಿಮೆ ದರವನ್ನು ಇಟ್ಟು, ಪ್ರಯಾಣಿಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿವೆ. ಇವೆಲ್ಲವುಗಳ ನಡುವೆಯೇ, ಕೆಎಸ್ಆರ್ಟಿಸಿಗೆ ಬಿಗ್ ಶಾಕ್ ಒಂದನ್ನು ಸುಪ್ರೀಂಕೋರ್ಟ್ ನೀಡಿದೆ. 2003ರಲ್ಲಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾರಿಗೆ ಬಸ್ಗೆ ಸಂಬಂಧಿಸಿದಂತೆ ಇದ್ದ ಕಾಯ್ದೆಗೆ ಸುಪ್ರೀಂಕೋರ್ಟ್ ಅಸ್ತು ಎಂದಿದೆ. ಈ ಮೂಲಕ KSRTCಯ ಏಕಸ್ವಾಮ್ಯವನ್ನು ತೆಗೆದುಹಾಕಿದೆ.
ಈ ಬಗ್ಗೆ ಇನ್ನೂ ಸುಲಭದಲ್ಲಿ ಹೇಳಬೇಕು ಎಂದಾದರೆ, ಇನ್ನು ಮುಂದೆ ಖಾಸಗಿ ಬಸ್ಗಳು ಯಾವ ಊರುಗಳಿಗೆ, ಯಾವ ಪ್ರದೇಶಗಳಿಗೆ ಬೇಕಾದರೂ ಹೋಗಬಹುದಾಗಿದೆ. ಇಲ್ಲಿಯವರೆಗೆ ಇದ್ದ ನಿಯಮ ಏನೆಂದರೆ, ಖಾಸಗಿ ಬಸ್ಗಳಿಗೆ ಎಲ್ಲಾ ರೂಟ್ಗಳಲ್ಲಿ ಕೆಎಸ್ಆರ್ಟಿಸಿ ಅವಕಾಶ ನೀಡುತ್ತಿರಲಿಲ್ಲ. ಎಲ್ಲಿ ಜನಸಂಖ್ಯೆ ಕಡಿಮೆ ಇದೆ, ವರ್ಕ್ಔಟ್ ಆಗುವುದಿಲ್ಲ ಎನ್ನುವ ಕೆಲವು ಕಡೆಗಳಲ್ಲಿ ಖಾಸಗಿ ಬಸ್ಗಳಿಗೆ ಸರ್ಕಾರ ಅನುಮತಿ ನೀಡುತ್ತಿತ್ತು. ಕೆಲವೇ ಕೆಲವು ಊರುಗಳಿಗೆ ಮಾತ್ರ ಖಾಸಗಿ ಮತ್ತು ಕೆಎಸ್ಆರ್ಟಿಸಿ ಬಸ್ ಈಗ ಚಲಿಸುತ್ತಿವೆಯಾದರೂ, ಎಷ್ಟೋ ರೂಟ್ಗಳಲ್ಲಿ ಜನರು ಸರ್ಕಾರಿ ಬಸ್ಗೆ ಕಾದು ಕುಳಿತುಕೊಳ್ಳುವ ಅನಿವಾರ್ಯತೆ ಇದೆ.
PublicNext
08/02/2025 08:26 pm