", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/387839-1739032237-WhatsApp-Image-2025-02-08-at-10.00.26-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಲಖನೌ: ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶದ ಜತೆಗೆ ಶನಿವಾರ ಉತ್ತರ ಪ್ರದೇಶದ ಮಿಲ್ಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ರಿಸಲ್ಟ್ ಕೂಡ ಹೊ...Read more" } ", "keywords": "BJP candidate Chandrabhanu Paswan wins Milkipur bypoll in Ayodhya by 70,000 votes,,Politics", "url": "https://publicnext.com/node" }
ಲಖನೌ: ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶದ ಜತೆಗೆ ಶನಿವಾರ ಉತ್ತರ ಪ್ರದೇಶದ ಮಿಲ್ಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ರಿಸಲ್ಟ್ ಕೂಡ ಹೊರಬಿದ್ದಿದ್ದು, ಬಿಜೆಪಿ ಜಯ ಗಳಿಸಿದೆ.
2024ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯನ್ನು ಒಳಗೊಂಡ ಫೈಝಾಬಾದ್ ಕ್ಷೇತ್ರದಲ್ಲಿ ಬಿಜೆಪಿ ಸೋಲು ಕಂಡಿತ್ತು. ಹೀಗಾಗಿ ಮಿಲ್ಕಿಪುರ ಕ್ಷೇತ್ರ ಸಾಕಷ್ಟು ಕುತೂಹಲ ಕೆರಳಿಸಿತ್ತು. ಈ ಕೇತ್ರದಲ್ಲಿ ಗೆದ್ದಿದ್ದ ಸಮಾಜವಾದಿ ಪಾರ್ಟಿ (SP)ಯ ಅವಧೇಶ್ ಪ್ರಸಾದ್ ಬಳಿಕ ರಾಜೀನಾಮೆ ನೀಡಿ ಫೈಝಾಬಾದ್ ಸಂಸದರಾಗಿ ಆಯ್ಕೆಯಾಗಿದ್ದರು. ಹೀಗಾಗಿ ಇಲ್ಲಿ ಉಪಚುನಾವಣೆ ನಡೆದಿತ್ತು.
ಮಿಲ್ಕಿಪುರದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಎಸ್‌ಪಿ ಯೋಜನೆ ರೂಪಿಸಿದ್ದರೆ, ಫೈಝಾಬಾದ್ ಸೋಲಿಗೆ ಸೇಡು ತೀರಿಸಲು ಬಿಜೆಪಿ ಈ ಅವಕಾಶವನ್ನು ಬಳಸಿಕೊಂಡಿತ್ತು. ಮತ ಎಣಿಕೆ ಪೂರ್ಣಗೊಂಡ ಬಳಿಕ ಬಿಜೆಪಿಯ ಚಂದ್ರಭಾನು ಪಾಸ್ವಾನ್ 1,46,397 ಮತ ಗಳಿಸಿ ಗೆಲುವಿನ ನಗೆ ಬೀರಿದರು. ಇತ್ತ ಎಸ್‌ಪಿ ಅಭ್ಯರ್ಥಿ, ಅವಧೇಶ್ ಪ್ರಸಾದ್ ಅವರ ಪುತ್ರ ಅಜಿತ್ ಪ್ರಸಾದ್ 84,687 ಮತ ಪಡೆದು 61,710 ವೋಟುಗಳ ಅಂತರದಿಂದ ಸೋಲೋಪ್ಪಿಕೊಂಡರು.
ಫೈಝಾಬಾದ್ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಭಾರಿಸಲಿದೆ ಎಂದೇ ಭಾವಿಸಲಾಗಿತ್ತು. ಅದರಲ್ಲಿಯೂ ಅದೇ ವರ್ಷ ಜನವರಿಯಲ್ಲಿ ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠೆ ನಡೆದಿದ್ದರಿಂದ ಕೇಸರಿ ಪಕ್ಷಕ್ಕೆ ಗೆಲುವು ಸುಲಭವಾಗಿ ದಕ್ಕಲಿದೆ ಎನ್ನುವ ಲೆಕ್ಕಾಚಾರವಿತ್ತು. ಆದರೆ ಬಿಜೆಪಿ 54,000 ಮತಗಳ ಅಂತರದಿಂದ ಎಸ್‌ಪಿ ಅಭ್ಯರ್ಥಿ ಅವಧೇಶ್ ಪ್ರಸಾದ್ ಎದುರು ಸೋಲಿಗೆ ಶರಣಾಗಿತ್ತು.
ಇದೇ ಕಾರಣಕ್ಕೆ ಮಿಲ್ಕಿಪುರ ಉಪಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿ ಬದಲಾಗಿತ್ತು. ಸಿಎಂ ಯೋಗಿ ಆದಿತ್ಯನಾಥ್ ಅವರು ತಮ್ಮ ಅಭ್ಯರ್ಥಿಯ ಪರ ಬಿರುಸಿನ ಪ್ರಚಾರ ಕೈಗೊಂಡಿದ್ದರು. ಅಯೋಧ್ಯೆ ಸೋಲಿಗೆ ಪ್ರತೀಕಾರ ತೀರಿಸುವಂತೆ ಅವರು ಮತದಾರರಿಗೆ ಕರೆ ನೀಡಿದ್ದರು.
PublicNext
08/02/2025 10:02 pm