ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗೂಗಲ್‌ ಮ್ಯಾಪ್‌ ನೋಡುತ್ತಾ ಕಾರು ಚಾಲನೆ - ಪ್ರಾಣ ತೆತ್ತ ವೈದ್ಯ.!

ಬೆಂಗಳೂರು: ಗೂಗಲ್‌ ಮ್ಯಾಪ್‌ ನಂಬಿ ಅದೆಷ್ಟೋ ಜನರು ಪ್ರಯಾಣ ಮಾಡುತ್ತಾರೆ. ಹೀಗೆ ಮಾಡಿ ಅನೇಕರು ಜೀವ ಕಳೆದುಕೊಂಡ ವರದಿಗಳು ಹೊರ ಬಿದ್ದಿವೆ. ಅದೇ ರೀತಿ ಗೂಗಲ್‌ ಮ್ಯಾಪ್‌ನಲ್ಲಿ ಮಗ್ನನಾಗಿದ್ದ ಕಾರು ಚಾಲಕನ ಎಡವಟ್ಟಿನಿಂದ ವೈದ್ಯನೋರ್ವ ದುರಂತ ಸಾವು ಕಂಡಿದ್ದಾನೆ.

ಹೈದರಾಬಾದ್‌ ಮೂಲದ ಅಮರ್ ಪ್ರಸಾದ್, ವೇಣು ಮತ್ತು ಪ್ರವಳಿಕಾ ಅನ್ನೋ ಮೂವರು ಸ್ನೇಹಿತರು ಕಾರಿನಲ್ಲಿ ತಮಿಳುನಾಡಿನ ಪಳನಿ ದೇವಸ್ಥಾನಕ್ಕೆ ಹೊರಟಿದ್ದರು. ಬೆಳಗಿನಜಾವ 2 ಗಂಟೆಗೆ ಹೈದರಬಾದ್‌ನಿಂದ ಹೊರಟವರು, ಬೆಳಗ್ಗೆ 10 ಗಂಟೆ ಹೊತ್ತಿಗೆ ಹೊಸಕೋಟೆ ಬಳಿ ಬಂದಿದ್ದರು. ದೇವನಹಳ್ಳಿ ಮೂಲಕ ಹೊಸಕೋಟೆಗೆ ಬರುತ್ತಿದ್ದ ಕಾರು, ಹೊಸಕೋಟೆ ಬಳಿಯ ರಾಷ್ಟ್ರೀಯ ಹೆದ್ದಾರಿ 648 ರಲ್ಲಿ ಕೋಲಾರದ ಹೆದ್ದಾರಿ ಕಡೆ ಯೂಟರ್ನ್ ಪಡೆಯುತ್ತಿದ್ದರು. ಗೂಗಲ್‌ ಮ್ಯಾಪ್‌ ನೋಡುತ್ತ ಕಾರು ಚಾಲನೆ ಮಾಡಿದ ಪರಿಣಾಮ ನೋಡ ನೋಡುತ್ತಿದ್ದಂತೆಯೇ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಾರ್‌ನ ಹಿಂಭಾಗದಲ್ಲಿ ಕೂತಿದ್ದ ಹೈದರಾಬಾದ್ ಮೂಲದ ವೈದ್ಯ ಅಮರ್ ಪ್ರಸಾದ್ ಎಂಬುವರು ಸ್ಥಳದಲ್ಲೆ ಸಾವನ್ನಪಿದ್ದಾರೆ.

ಇನ್ನು ಸ್ಥಳದಲ್ಲಿದ್ದವರು, ಕಾರ್‌ನಲ್ಲಿದ್ದ ವೈದ್ಯೆ ಪ್ರವಳಿಕಾ ಮತ್ತು ವೇಣು ಅನ್ನೋರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಣ್ಣಪುಟ್ಟ ಗಾಯದೊಂದಿಗೆ ಇಬ್ಬರು ಬದುಕುಳಿದಿದ್ದಾರೆ .

Edited By : Vijay Kumar
Kshetra Samachara

Kshetra Samachara

07/02/2025 02:42 pm

Cinque Terre

1.16 K

Cinque Terre

0