ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಜವಳಿ ಮಳಿಗೆ ಬೆಂಕಿಗಾಹುತಿ - ಕೋಟ್ಯಂತರ ರೂ ನಷ್ಟ

ಸುರತ್ಕಲ್: ಬಟ್ಟೆ ವಿನ್ಯಾಸ ಹಾಗೂ ಜವಳಿ ಮಳಿಗೆಯೊಂದು ಬೆಂಕಿಗಾಹುತಿಯಾದ ಘಟನೆ ಸುರತ್ಕಲ್ ಪೂರ್ವ ಆರ್ಕೆಡ್‌ನಲ್ಲಿ ಬುಧವಾರ ತಡರಾತ್ರಿ 1 ಗಂಟೆಗೆ ಸುಮಾರಿಗೆ ನಡೆದಿದೆ.

ಕೃಷ್ಣಾಪುರ ನಿವಾಸಿ ಶಮೀಮ್ ಎಂಬವರಿಗೆ ಸೇರಿದ ಮಳಿಗೆಯಲ್ಲಿ ಈ ಘಟನೆ ಸಂಭವಿಸಿದ್ದು, 1 ಕೋಟಿ ರೂ. ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅಂಗಡಿಯ ಮೇಲ್ಬಾವಣಿಯಲ್ಲಿನ ಬಟ್ಟೆ ವಿನ್ಯಾಸ ವಿಭಾಗದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ

ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಗೆ ಕ್ಷಣಾರ್ಧದಲ್ಲಿ ಇಡೀ ಮಳಿಗೆಯನ್ನು ಸುಟ್ಟು ಭಸ್ಮ ಮಾಡಿತು.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಮೂರು ಮತ್ತು ಎಂಆರ್‌ಪಿಎಲ್‌ನ ಒಂದು ಅಗ್ನಿ ಶಾಮಕ ವಾಹನಗಳು ಸತತ 4 ಗಂಟೆಯವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರೆನ್ನಲಾಗಿದೆ.

ಘಟನಾ ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Edited By : PublicNext Desk
Kshetra Samachara

Kshetra Samachara

07/02/2025 10:13 am

Cinque Terre

4.21 K

Cinque Terre

0