", "articleSection": "Public News", "image": { "@type": "ImageObject", "url": "https://prod.cdn.publicnext.com/s3fs-public/41912020250205072638filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "9481623116" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕಮಗಳೂರು: 2025ನೇ ಮಾರ್ಚ್ 07 ಮತ್ತು 08 ರಂದು ತರೀಕೆರೆ ಪಟ್ಟಣದಲ್ಲಿ ಚಿಕ್ಕಮಗಳೂರು ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು...Read more" } ", "keywords": "Node,Chikmagalur,Public-News Chikmagalur: 20th District Kannada Literature Conference Dr. Malasiddaiah Patel's choice,Public-News", "url": "https://publicnext.com/node" } ಚಿಕ್ಕಮಗಳೂರು: 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಧ್ಯಕ್ಷರಾಗಿ ಡಾ. ಮರಳಸಿದ್ದಯ್ಯ ಪಟೇಲ್ ಆಯ್ಕೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಧ್ಯಕ್ಷರಾಗಿ ಡಾ. ಮರಳಸಿದ್ದಯ್ಯ ಪಟೇಲ್ ಆಯ್ಕೆ

ಚಿಕ್ಕಮಗಳೂರು: 2025ನೇ ಮಾರ್ಚ್ 07 ಮತ್ತು 08 ರಂದು ತರೀಕೆರೆ ಪಟ್ಟಣದಲ್ಲಿ ಚಿಕ್ಕಮಗಳೂರು ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಭೂಮಿಕೆ ಸಿದ್ಧವಾಗುತ್ತಿದೆ. ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಉಪನ್ಯಾಸಕ ಮತ್ತು ಸಾಹಿತಿ ಡಾ. ಮರಳಸಿದ್ದಯ್ಯ ಪಟೇಲ್ ಆಯ್ಕೆಯಾಗಿದ್ದಾರೆ.

ಈ ಬಾರಿ ನಡೆಯುವ ಚಿಕ್ಕಮಗಳೂರು ಜಿಲ್ಲಾ ಮಟ್ಟದ ಈ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವು ಇದೇ ತರೀಕೆರೆ ತಾಲೂಕಿನ ರಂಗೇನಹಳ್ಳಿ ಗ್ರಾಮದ ಕೃಷಿಕ ದಂಪತಿಗಳಾದ ಶ್ರೀ ಮರಿಯಪ್ಪಯ್ಯ ಪಟೇಲ್‌ ಶ್ರೀಮತಿ ಪ್ರತಿಭಾ ಪಟೇಲ್ ಮಗನಾಗಿ, ಬೋಧಕನಾಗಿ, ಸಂಶೋಧಕನಾಗಿ, ಸಾಹಿತಿಯು ಆದ ಡಾ. ಮರಳಸಿದ್ದಯ್ಯ ಪಟೇಲ್‌ ಅವರಿಗೆ ಒಲಿದಿದೆ.

20ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಡಾ. ಮರಳಸಿದ್ದಯ್ಯ ಪಟೇಲ್ ಅವರ ಹೆಸರನ್ನು ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಈಗಾಗಲೇ ಘೋಷಣೆ ಮಾಡಿದೆ. ಡಾ. ಮರಳಸಿದ್ದಯ್ಯ ಪಟೇಲ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವು ತಮ್ಮ ಹುಟ್ಟುರಾದ ರಂಗೇನಹಳ್ಳಿ ಹಾಗೂ ಲಕ್ಕವಳ್ಳಿಯಲ್ಲಿ ನಡೆದಿದೆ. ನಂತರ ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ಶಿವಮೊಗ್ಗದಲ್ಲಿ ಪಡೆದು, ತದನಂತರ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿ ಎಚ್ ಡಿ ಯನ್ನು ಗಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

05/02/2025 07:26 pm

Cinque Terre

260

Cinque Terre

0

ಸಂಬಂಧಿತ ಸುದ್ದಿ