", "articleSection": "Politics,Infrastructure", "image": { "@type": "ImageObject", "url": "https://prod.cdn.publicnext.com/s3fs-public/378325-1738757533-8.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Honnuruswami Ballari" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬಳ್ಳಾರಿ : ನಗರದ ದುರ್ಗಮ್ಮ ಗುಡಿ ಬ್ರಿಡ್ಜ್ ಕಳಪೆ ಕಾಮಗಾರಿ ದರ್ಶನ ಎಂದು ನಿನ್ನೆ (ಫೆಬ್ರವರಿ 4) ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿತ್ತು. ಇಲ್...Read more" } ", "keywords": "Here are the English SEO keywords in comma-separated format: Ballari, Public Works Department, Lokayukta Investigation, Bridge Construction, Corruption Allegations, Karnataka News, Ballari News, Lokayukta Report, Government Projects, Transparency in Governance.,Bellary,Politics,Infrastructure", "url": "https://publicnext.com/node" } ಬಳ್ಳಾರಿ: ವಿರೋಧ ಪಕ್ಷಕ್ಕೆ ಧ್ವನಿಯಾದ ಪಬ್ಲಿಕ್ ನೆಕ್ಸ್ಟ್ ವರದಿ, ಲೋಕಾಯುಕ್ತ ತನಿಖೆಯತ್ತ ಬ್ರಿಡ್ಜ್ ಕಾಮಗಾರಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ: ವಿರೋಧ ಪಕ್ಷಕ್ಕೆ ಧ್ವನಿಯಾದ ಪಬ್ಲಿಕ್ ನೆಕ್ಸ್ಟ್ ವರದಿ, ಲೋಕಾಯುಕ್ತ ತನಿಖೆಯತ್ತ ಬ್ರಿಡ್ಜ್ ಕಾಮಗಾರಿ

ಬಳ್ಳಾರಿ : ನಗರದ ದುರ್ಗಮ್ಮ ಗುಡಿ ಬ್ರಿಡ್ಜ್ ಕಳಪೆ ಕಾಮಗಾರಿ ದರ್ಶನ ಎಂದು ನಿನ್ನೆ (ಫೆಬ್ರವರಿ 4) ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿತ್ತು.

ಇಲ್ಲಿವರೆಗೂ ಯಾವುದೇ ಪ್ರತಿಭಟನೆ ಇಲ್ಲದೇ ನನಗೂ ಇದಕ್ಕೂ ಸಂಬಂಧವಿಲ್ಲದಂತೆ ಕುಳಿತಿದ್ದ ವಿರೋಧ ಪಕ್ಷ ದಿಢೀರನೆ ವರದಿಗೆ ಎಚ್ಚೆತ್ತು ಕಳಪೆ ಕಾಮಗಾರಿ ಬಗ್ಗೆ ಮಾಹಿತಿ ಕಲೆ ಹಾಕಿ ನಿನ್ನೆ ಸಂಜೆ ಏಕಾಏಕಿ ಪ್ರತಿಭಟನೆಗೆ ಮುಂದಾಗಿ‌ ಬ್ಯಾರಿಕೇಡ್ ಕಿತ್ತುಹಾಕಲು ಮುಂದಾಗಿದ್ದು, ಸ್ಥಳಕ್ಕೆ ಪೊಲೀಸ್ ಪಡೆ ಧಾವಿಸಿ ಗಲಾಟೆ ನಿಯಂತ್ರಿಸಿತ್ತು..

ಇಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ, ವಿಧಾನ ಪರಿಷತ್ತಿನ ಸದಸ್ಯ ವೈ.ಎಂ.ಸತೀಶ್, ಈ ರಸ್ತೆಯ ಕಾಮಗಾರಿಯ ಒಟ್ಟು ವೆಚ್ಚ 1.80 ಕೋಟಿ ರೂಗಳಿದ್ದು, ಈಗ ಆಗಿರುವ ಕೆಲಸವನ್ನು ನೋಡಿದರೆ ಅಷ್ಟೊಂದು ಮೊತ್ತ ವೆಚ್ಚವಾಗಿಲ್ಲ. ಕಾಮಗಾರಿಯ ವೆಚ್ಚವನ್ನು ಅಗತ್ಯಕ್ಕಿಂತ ಹೆಚ್ಚು ನಿಗಧಿ ಮಾಡಿದಂತೆ ಇದೆ. ಹಾಕಿರುವ ಗ್ರಿಲ್ ಗಳು ಈಗಲೇ ಅಲ್ಲಾಡುತ್ತಿವೆ. ಕಾಮಗಾರಿ ಗುಣಮಟ್ಟ ಪರಿಶೀಲನೆ ಮಾಡಿದ ನಂತರ ಪೇಮೆಂಟ್ ಮಾಡಿ ಎಂದು ಡಿಸಿಯವರಿಗೆ ದೂರು ನೀಡಲಿದ್ದೇವೆ. ಕಾಮಗಾರಿ ತನಿಖೆಗೆ ಲೋಕಾಯುಕ್ತಕ್ಕೆ ಸಹ ದೂರು ನೀಡಲಿದ್ದು, ಅಲ್ಲದೇ ಸದನದಲ್ಲೂ ಈ ಕುರಿತು ತನಿಖೆಗೆ ಧ್ವನಿ ಎತ್ತಲಾಗುವುದು ಎಂದರು .

ಹೊನ್ನುರಸ್ವಾಮಿ ಕೆ.ಟಿ.,ಪಬ್ಲಿಕ್ ನೆಕ್ಸ್ಟ್ , ಬಳ್ಳಾರಿ

Edited By : Somashekar
PublicNext

PublicNext

05/02/2025 05:42 pm

Cinque Terre

14.21 K

Cinque Terre

0