", "articleSection": "Infrastructure,Crime,Law and Order,Human Stories,Education", "image": { "@type": "ImageObject", "url": "https://prod.cdn.publicnext.com/s3fs-public/378325-1738676158-13.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MaheshKalburgi" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಲಬುರಗಿ: ಶಾಲೆಯಲ್ಲಿ ಬಾಂಬ್ ಇಡಲಾಗಿದೆ ಎಂದು ಅಪರಿಚಿತರಿಂದ ಖಾಸಗಿ ಶಾಲೆಗೆ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ರವಾನಿಸಲಾಗಿರುವ ಘಟನೆ ಕಲಬುರಗಿ ನಗ...Read more" } ", "keywords": "Kalaburagi, Private School, Bomb Threat, Hoax Message, Bomb Disposal Squad, Investigation, Karnataka News, Kalaburagi News, School Safety, Bomb Scare.,Gulbarga,Infrastructure,Crime,Law-and-Order,Human-Stories,Education", "url": "https://publicnext.com/node" }
ಕಲಬುರಗಿ: ಶಾಲೆಯಲ್ಲಿ ಬಾಂಬ್ ಇಡಲಾಗಿದೆ ಎಂದು ಅಪರಿಚಿತರಿಂದ ಖಾಸಗಿ ಶಾಲೆಗೆ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ರವಾನಿಸಲಾಗಿರುವ ಘಟನೆ ಕಲಬುರಗಿ ನಗರದ ಕರುಣೇಶ್ವರ ಕಾಲೋನಿಯ ಚಂದ್ರಕಾಂತ್ ಪಾಟೀಲ್ ಖಾಸಗಿ ಶಾಲೆಯಲ್ಲಿ ನಡೆದಿದೆ.
ಈ ಸಂದೇಶದಿಂದ ಶಾಲೆಯ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಶಾಲೆಗೆ ಸಂದೇಶ ಬರುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ಆಡಳಿತ ಮಂಡಳಿಯು ಶಾಲೆಯಲ್ಲಿನ ಮಕ್ಕಳನ್ನು ಮನೆಗೆ ಕಳುಹಿಸಿದೆ. ಸ್ಥಳಕ್ಕೆ ಪೊಲೀಸ್ ಕಮಿಷನರ್ ಡಾ.ಶರಣಪ್ಪ ಢಾಗೆ ಹಾಗೂ ಶ್ವಾನದಳ ಮತ್ತು ಮೆಟಲ್ ಡಿಟೆಕ್ಟರ್ ತಂಡದಿಂದ ಶಾಲೆಯಲ್ಲಿ ತೀವ್ರವಾಗಿ ತಪಾಸಣೆ ಮಾಡಿ ಇದೊಂದು ಹುಸಿ ಬಾಂಬ್ ಕರೆ ಎಂಬುದು ದೃಢಪಡಿಸಿದ ನಂತರ ಆಡಳಿತ ಮಂಡಳಿ ನಿರಾಳವಾಗಿದೆ. ಅಶೋಕ್ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
PublicNext
04/02/2025 07:06 pm