", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/37941320250204053220filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MaheshKalburgi" }, "editor": { "@type": "Person", "name": "9739216636" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಕಲಬುರಗಿ: ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ ಮತ್ತು ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಪ್ರಸಕ್ತ 2024-25ನೇ ಸಾಲಿನ ವಿಶೇಷ ಘಟಕ ಯೋಜ...Read more" } ", "keywords": "Node,Gulbarga,Politics", "url": "https://publicnext.com/node" }
ಕಲಬುರಗಿ: ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ ಮತ್ತು ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಪ್ರಸಕ್ತ 2024-25ನೇ ಸಾಲಿನ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಪ್ರೌಢ ಶಾಲೆಯ ಎಸ್.ಸಿ-ಎಸ್.ಟಿ ವಿದ್ಯಾರ್ಥಿಗಳಿಗೆ ಆಯೋಜಿಸಿದ ಕರ್ನಾಟಕ ದರ್ಶನ ಪ್ರವಾಸಕ್ಕೆ ಇಂದು ಶಾಸಕ ಅಲ್ಲಮಪ್ರಭು ಪಾಟೀಲ ಅವರು ಚಾಲನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಅವರಣದಲ್ಲಿ ಮೂರು ದಿನಗಳ ಪ್ರವಾಸಕ್ಕೆ ಹೊರಟ 98 ವಿದ್ಯಾರ್ಥಿಗಳ ಕಲಬುರಗಿ ದಕ್ಷಿಣ ವಲಯ ತಂಡಕ್ಕೆ ಹಸಿರು ನಿಶಾನೆ ತೋರಿ ಪ್ರವಾಸಕ್ಕೆ ಶುಭ ಕೋರಿದರು.
78 ಎಸ್.ಸಿ. ಮತ್ತು 20 ಎಸ್.ಟಿ ಸೇರಿ ಒಟ್ಟು 98 ವಿದ್ಯಾರ್ಥಿಗಳ ಪ್ರವಾಸಿ ತಂಡವು ಮಂಗಳವಾರ ವಿಜಯಪುರ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸಿ ಐಹೊಳೆಯಲ್ಲಿ ವಾಸ್ತವ್ಯ ಮಾಡಲಿದೆ. ಎರಡನೇ ದಿನ ಐಹೊಳೆ, ಬದಾಮಿ, ಯುನೆಸ್ಕೋ ಪಟ್ಟಿಯಲ್ಲಿರುವ ಪಟ್ಟದಕಲ್ಲು ವೀಕ್ಷಿಸಿ ಗೋಕರ್ಣದಲ್ಲಿ ತಂಗಲಿದ್ದಾರೆ. ಮೂರನೇ ದಿನ ಗುರುವಾರ ಗೋಕರ್ಣ, ಮುರುಡೇಶ್ವರ, ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಿಸಿ ಕೋಟೆ ನಾಡು ಚಿತ್ರದುರ್ಗದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಶುಕ್ರವಾರ ಚಿತ್ರದುರ್ಗ ಕೋಟೆ, ವಿಶ್ವವಿಖ್ಯಾತ ಹಂಪಿ, ತುಂಗಭದ್ರಾ ಜಲಾಶಯ ವೀಕ್ಷಿಸಿ ಮರಳಿ ಕಲಬುರಗಿಯತ್ತ ಪ್ರಯಾಣ ಬೆಳೆಸಲಿದ್ದಾರೆ. ಎರಡು ಬಸ್ ನಲ್ಲಿ ಸಂಚರಿಸಲಾಗಿತ್ತಿದ್ದು, ಪ್ರತಿ ಬಸ್ ಗೆ ಇಬ್ಬರು ಶಿಕ್ಣಕರನ್ನು ನಿಯೋಜಿಸಲಾಗಿದೆ.
Kshetra Samachara
04/02/2025 05:32 pm