", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/286525-1738673794-WhatsApp-Image-2025-02-04-at-6.26.23-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Raghavendra Bng" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನೆಲಮಂಗಲ: ಕನ್ನಡದಲ್ಲಿ ಮಾತಾಡಿ ಎಂದ‌ ಕನ್ನಡಿಗ ಫುಡ್ ಡಿಲಿವರಿ ಬಾಯ್ ಮೇಲೆ ಪರಭಾಷಿಕರಿಂದ ಹಲ್ಲೆ ಪ್ರಕರಣ ಸಂಬಂಧ ಇಂದು ಡೆಲಿವರಿ ಬಾಯ್ ಪರವಾಗಿ ಕ...Read more" } ", "keywords": "Bengaluru, Kannada Activists, Language Issue, Pro-Kannada Organizations, Protest Against Non-Kannadigas, Karnataka News, Language Conflict, Bengaluru News, Kannada Language Rights, Regional Pride.,Bangalore,Bangalore-Rural,Crime", "url": "https://publicnext.com/node" } ಬೆಂಗಳೂರು: ಕನ್ನಡಿಗನ ಮೇಲೆ ಪರಭಾಷಿಕರಿಂದ ಹಲ್ಲೆ - ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕನ್ನಡಿಗನ ಮೇಲೆ ಪರಭಾಷಿಕರಿಂದ ಹಲ್ಲೆ - ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

ನೆಲಮಂಗಲ: ಕನ್ನಡದಲ್ಲಿ ಮಾತಾಡಿ ಎಂದ‌ ಕನ್ನಡಿಗ ಫುಡ್ ಡಿಲಿವರಿ ಬಾಯ್ ಮೇಲೆ ಪರಭಾಷಿಕರಿಂದ ಹಲ್ಲೆ ಪ್ರಕರಣ ಸಂಬಂಧ ಇಂದು ಡೆಲಿವರಿ ಬಾಯ್ ಪರವಾಗಿ ಕನ್ನಡಪರ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ನೆಡೆಸುತ್ತಿದರು.

ಮೊನ್ನೆ ರಾತ್ರಿ ಟಿ.ದಾಸರಹಳ್ಳಿ ಸಮೀಪದ ಗೆಳೆಯರ ಬಳಗದಲ್ಲಿರುವ ಗಬ್ರು ಹೋಟೆಲ್‌ನಲ್ಲಿ ಸ್ವಿಗ್ಗಿಯಲ್ಲಿ ಕೆಲಸ ಮಾಡುವ ಚಿಕ್ಕಸಂದ್ರದ ನವೀನ್ ಎಂಬಾತನಿಗೆ, ನೀವು 'ಕನ್ನಡದಲ್ಲಿ ಮಾತಾಡಿ' ಅರ್ಥ ಆಗ್ತಿಲ್ಲ ಅಂತ ಹೇಳಿದ ಕಾರಣಕ್ಕೆ ಹೋಟೆಲ್‌ನ ಹಿಂದಿ ಸಿಬ್ಬಂದಿ ನವೀನ್ ಮೇಲೆ ಹಲ್ಲೆ ಮಾಡಿದ್ದಾರೆ.

ಹೀಗಾಗಿ ಇಂದು ಕನ್ನಡಪರ ಸಂಘಟನೆಗಳು ನವೀನ್ ಪರವಾಗಿ ಗಬ್ರು ಹೋಟೆಲ್ ಬಳಿ ನ್ಯಾಯಬೇಕು ಅಂತ ಪ್ರತಿಭಟನೆ ನೆಡೆಸಿದರು. ಹಲ್ಲೆ ನಡೆಸಿದ ಹಿಂದಿವಾಲಾಗಳು ಈ ಕೂಡಲೇ ಕ್ಷಮೆ ಕೇಳಬೇಕು. ಹಲ್ಲೆಕೋರರ ಮೇಲೆ ಎಫ್ಐಆರ್ ದಾಖಲಿಸಿ, ಕೂಡಲೇ ಕಾನೂನು‌ ರೀತಿ ಶಿಸ್ತು ಕ್ರಮಕೈಗೊಳ್ಳಬೇಕು‌ ಎಂದು ಆಗ್ರಹಿಸಿದರು.

ಇದೇ ವೇಳೆ ನವೀನ್ ಮಾತನಾಡಿ ಆರ್ಡರ್‌ ಮಾಡಿ ಮುಕ್ಕಾಲು ಗಂಟೆ ಕಾದುನಿಂತಿದ್ದೆ. ಬೇಗ ಕೊಡಿ ಅಂತ ಕನ್ನಡದಲ್ಲಿ ಕೇಳಿದಕ್ಕೆ ಆರ್ಡರ್‌ ಕೊಡಲ್ಲ ಎಂದು ಎಸೆದು ನಿರಾಕರಿಸಿದರು. ಕೋಪಗೊಂಡು ಹೊಡೆದ್ರು, ಹೋಟೆಲ್‌ನಲ್ಲಿ ಇದ್ದವರು ಗಲಾಟೆ ಮಾಡಿ ನನ್ನ ಮೇಲೆ ಹಲ್ಲೆ ಮಾಡಿದರು. ನಾನು ಸಮಾಧಾನವಾಗಿ ಕೇಳಿದರೂ ಎಲ್ಲ ಸೇರಿ ಹಲ್ಲೆ ಮಾಡಿದ್ರು ಎಂದರು.

Edited By : Shivu K
PublicNext

PublicNext

04/02/2025 06:27 pm

Cinque Terre

16.41 K

Cinque Terre

0