", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/405356-1738639806-kalla.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ನಗರದ ಹೊರವಲಯಲ್ಲಿ ಜನರ ನಿದ್ದೆಗೆಡಿಸಿದ್ದ ಕೃಷ್ಣಗಿರಿ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ‌. ಈ ಖತರರ್ನಾಕ್ ಗ್ಯಾಂಗ್ ಕಳ್ಳತನ ಕಸಬು ...Read more" } ", "keywords": "Bangalore, Krishnagiri Gang, Arrested, Robbery, Theft, Crime News, Bengaluru Police, Karnataka Crime, Night Robbers, Gang Arrest, Crime Prevention, Law and Order.,Bangalore-Rural,Crime,Law-and-Order", "url": "https://publicnext.com/node" } ಬೆಂಗಳೂರು ಹೊರವಲಯದಲ್ಲಿ ಜನರ ನಿದ್ದೆಗೆಡಿಸಿದ್ದ ಕೃಷ್ಣಗಿರಿ ಗ್ಯಾಂಗ್ ಅರೆಸ್ಟ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ಹೊರವಲಯದಲ್ಲಿ ಜನರ ನಿದ್ದೆಗೆಡಿಸಿದ್ದ ಕೃಷ್ಣಗಿರಿ ಗ್ಯಾಂಗ್ ಅರೆಸ್ಟ್

ಬೆಂಗಳೂರು: ನಗರದ ಹೊರವಲಯಲ್ಲಿ ಜನರ ನಿದ್ದೆಗೆಡಿಸಿದ್ದ ಕೃಷ್ಣಗಿರಿ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ‌. ಈ ಖತರರ್ನಾಕ್ ಗ್ಯಾಂಗ್ ಕಳ್ಳತನ ಕಸಬು ಕೇಳಿ ಪೊಲೀಸರೇ ಶಾಕ್ ಆಗಿದ್ದರು. ತಮಿಳುನಾಡಿನಲ್ಲಿ ಬೈಕ್‌ಗಳಲ್ಲಿ ಕಳ್ಳತನ ಮಾಡ್ತಿದ್ದ ಗ್ಯಾಂಗ್ ಇದನ್ನೇ ವೃತ್ತಿಯಾಗಿಸಿಕೊಂಡು ಬೈಕ್ ಬಿಟ್ಟು ಕಾರು ಖರೀದಿಸಿ ಅದ್ರಲ್ಲೇ ಕಳ್ಳಾಟ ಆಡುತ್ತಿದ್ದರು.

ಬೆಂಗಳೂರಿನಲ್ಲಿ ಕೆಜಿ ಗಟ್ಟಲೆ ಚಿನ್ನಾಭರಣ ಹೊತ್ತೊಯ್ಯಲು ಹೊಸ ಕಾರು ಖರೀದಿಸಿಕೊಂಡು ಬಂದಿದ್ರಂತೆ. ಈ ಗ್ಯಾಂಗ್ ಎಂಟ್ರಿ ಕೊಟ್ಟರೆ ಕೇವಲ ಒಂದು ಮನೆಯಲ್ಲಾ ಏರಿಯಾದಲ್ಲಿನ ಐದಾರು ಮನೆಗಳಿಗೆ ಕನ್ನ ಹಾಕಿ ಹೋಗ್ತಿದ್ರು. ಒಂದು ದಿನ ಆ ಮನೆ ಮಿಸ್ ಆದ್ರೂ ಠಿಕಾಣಿ ಹಾಕಿ ಸ್ಕೆಚ್ ಹಾಕಿದ ಮನೆಯನ್ನೇ ದೋಚಿ ಈ ಗ್ಯಾಂಗ್ ಎಸ್ಕೇಪ್ ಆಗ್ತಿತ್ತು. ಸದ್ಯ ಈ ಗ್ಯಾಂಗ್ ಅವಲಹಳ್ಳಿ ಪೊಲೀಸರ ಬಲೆಗೆ ಬಿದ್ದಿದೆ. ಗ್ಯಾಂಗ್ ನ ಚಂದ್ರು ಹಾಗೂ ಚಂದ್ರಕಾಂತ್ ಅಲಿಯಾಸ್ ಮಾರಿಮುತ್ತು ಪೊಲೀಸರ ಬಲಗೆ ಬಿದ್ದಿದ್ದಾರೆ.

ಮನೆಯಲ್ಲಿ ಕದ್ದ ಬಟ್ಟೆಯನ್ನೇ ಧರಿಸಿ ಪಕ್ಕದ ಮನೆಯಲ್ಲಿ ಕಳ್ಳತನ ಮಾಡಿದ್ದ ಇವ್ರು, ಕದ್ದ ಚಿನ್ನಾಭರಣವನ್ನು ಸೇಲಂ ಬ್ಯಾಂಕ್‌ಗಳಿಗೆ ಮಾರಾಟ ಮಾಡುತ್ತಿದ್ದರು. ಕೆಜಿಗಟ್ಟಲೆ ಚಿನ್ನಾಭರಣವನ್ನು ಹೊತ್ತೊಯ್ಯಲು ಹೊಸ ಕಾರು ಖರೀದಿಸಿ, ತಮಿಳುನಾಡಲ್ಲೇ ಮಾಸ್ಕ್, ಗ್ಲೌಸ್, ಟೂಲ್ಸ್ ಖರೀದಿಸಿ ತರುತ್ತಿದ್ದರಂತೆ.

ಸೇಲಂನಲ್ಲಿ ಕದ್ದ ಚಿನ್ನಾಭರಣ ಹಂಚಿಕೆ ಮಾಡುವಾಗಲೇ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕಳೆದ ಹದಿನೈದು ದಿನದ ಹಿಂದೆ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ರು. ಪ್ರಕರಣ ದಾಖಲಿಸಿಕೊಂಡು ಕಳ್ಳರ ಬೆನ್ನತ್ತಿದ್ದ ಪೊಲೀಸ್ರು ಆರೋಪಿಗಳನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Edited By : Vinayak Patil
PublicNext

PublicNext

04/02/2025 09:00 am

Cinque Terre

25.67 K

Cinque Terre

0