ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಗ್ಗಾವಿ: 150 ಕಿಲೋ ಮೀಟರ್ ಹಿಮ್ಮುಖ ಟ್ರಾಕ್ಟರ್ ಟೇಲರ್ ಚಾಲನೆ- ಸಾಹಸ ಮೆರೆದ ರೈತ ನಾಗರಾಜ

ಶಿಗ್ಗಾವಿ: ಶಿಗ್ಗಾವಿ (ತಡಸ) ತಾಲೂಕಿನ ಮಮದಾಪುರ ಗ್ರಾಮದ ರೈತ ನಾಗರಾಜ ಗೋಪಾಲ ಲಮಾಣಿ ಅವರು ಶ್ರೀ ಸೇವಾಲಾಲ್ ಜನ್ಮಸ್ಥಳವಾದ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೋರಗೊಂಡನಕೊಪ್ಪ( ಭಾಯಾಗಡ)ಕ್ಕೆ ಹಿಮ್ಮುಖ ಟ್ರಾಕ್ಟರ್ ಟೇಲರ್ ಸಮೇತ ಓಡಿಸುವ ಮೂಲಕ ಗಮನ ಸೆಳೆದಿದ್ದಾರೆ.

ಮಮದಾಪುರ ಗ್ರಾಮದಿಂದ 150 ಕಿಲೋ ಮೀಟರ್ ದೂರವಿರುವ ಸೇವಾಲಾಲರ ಮೂಲ ಸ್ಥಳಕ್ಕೆ ಹೋಗಿ ಬರುವ ನನ್ನ ಬೇಡಿಕೆ ಇಂದು ಈಡೇರಿದೆ ಎಂದು ನಾಗರಾಜ ಗೋಪಾಲ ಲಮಾಣಿ ಹೇಳಿದರು.

ಈ ಸಂದರ್ಭದಲ್ಲಿ ಚಂದಪ್ಪ ನಾಯ್ಕ, ಡಾ.ಪೋಮಣ್ಣ ಲಮಾಣಿ, ಪತ್ರಕರ್ತ ಪುಟ್ಟಪ್ಪ ಲಮಾಣಿ, ಅಪ್ಪಣ್ಣ ಹುಬ್ಬಳ್ಳಿ, ಮೋದಕಪ್ಪ ಬೊಮ್ಮಸಮುದ್ರ, ಶಿವಾನಂದ ನಿಂಬರಗಿ, ಪೀರಪ್ಪ ನಾಯ್ಕ, ದೇವರಾಜ ಲಮಾಣಿ, ರಮೇಶ ಪೂಜಾರ ಇತರರು ಇದ್ದರು.

Edited By : Shivu K
PublicNext

PublicNext

02/02/2025 04:50 pm

Cinque Terre

31.76 K

Cinque Terre

0