ಹಾವೇರಿ: ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕು ಗೋಟಗೊಡಿಯ ಕಲಾ ಕುಟೀರ ರಾಜ್ಯದಲ್ಲಿ ಸಿಮೆಂಟ್ ಶಿಲ್ಪ ಕಲೆಗೆ ಹೆಸರುವಾಸಿ. ರಾಜ್ಯದಲ್ಲಿರುವ ಬಹುತೇಕ ಥೀಮ್ ಪಾರ್ಕ್‌ಗಳು ನಿರ್ಮಾಣವಾಗಿದ್ದು, ಈ ಕುಟೀರದಲ್ಲಿ ತಯಾರಿಸುವ ಸಿಮೆಂಟ್ ಶಿಲ್ಪ ಕಲಾಕೃತಿಗಳಿಂದ.
ದಿವಂಗತ ಡಾ.ಟಿ.ಬಿ.ಸೋಲಬಕ್ಕನವರ್ ಸ್ಥಾಪಿಸಿರುವ ಕಲಾ ಕುಟೀರಕ್ಕೆ ಇದೀಗ 34 ವರ್ಷ. ಆರಂಭದಲ್ಲಿ ಬೆರಳೆಣಿಕೆಯಷ್ಟು ಸಿಮೆಂಟ್ ಶಿಲ್ಪ ಕಲಾಕೃತಿ ರಚಿಸುತ್ತಿದ್ದ ಕುಟೀರ ಇದೀಗ ವರ್ಷಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸಿಮೆಂಟ್ ಶಿಲ್ಪಕಲಾಕೃತಿ ನಿರ್ಮಿಸುತ್ತಿದೆ. ದಿನನಿತ್ಯ ನೂರಕ್ಕೂ ಅಧಿಕ ಕಲಾವಿದರು ಇಲ್ಲಿ ಕಲಾಕೃತಿ ರಚಿಸುತ್ತಾರೆ. ಕಟ್ಟಡ ಕಟ್ಟಲು ಬಳಿಸುವ ಸ್ಟೀಲ್, ಸಿಮೆಂಟ್, ಮರಳು, ಜಾಲರಿ ಮತ್ತು ಪೇಂಟ್‌ಗಳಲ್ಲಿ ಇಲ್ಲಿ ಕಲಾಕೃತಿಗಳು ಅರಳುತ್ತೀವೆ. ಈ ಕುಟೀರದ ವಿಶೇಷತೆ ಅಂದರೆ ರಿಯಾಲಿಸ್ಟಿಕ್. ಕಲಾಕೃತಿಗಳು.
PublicNext
02/02/2025 10:29 am