ಕೋಲ್ಕತ್ತಾ: ಟೀಂ ಇಂಡಿಯಾ ವಿಕೆಟ್ ಕೀಪರ್, ಬ್ಯಾಟರ್ ವೃದ್ಧಿಮಾನ್ ಸಹಾ ಶನಿವಾರ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಪಂಜಾಬ್ ವಿರುದ್ಧ ತಮ್ಮ ಅಂತಿಮ ರಣಜಿ ಟ್ರೋಫಿ ಗುಂಪು-ಹಂತದ ಪಂದ್ಯವನ್ನು ಆಡಿದ ನಂತರ 40ರ ಹೆರೆಯದ ವೃದ್ಧಿಮಾನ್ ಸಹಾ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.
ವೃದ್ಧಿಮಾನ್ ಸಹಾ ಅವರು ಫೆಬ್ರವರಿ 2010ರಲ್ಲಿ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯ ಆಡಿದ್ದರು. 40 ಟೆಸ್ಟ್ ಮತ್ತು 9 ಏಕದಿನ ಸೇರಿ 49
ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಬಂಗಾಳ ಮತ್ತು ತ್ರಿಪುರಾವನ್ನು ಪ್ರತಿನಿಧಿಸಿದ್ದರು. 142 ಪ್ರಥಮ ದರ್ಜೆ ಮತ್ತು 116 ಲಿಸ್ಟ್ ಎ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದ ಎಕ್ಸ್‌ನಲ್ಲಿ ಪೋಸ್ಟ್ ವೊಂದನ್ನು ಹಾಕಿರುವ ವೃದ್ಧಿಮಾನ್ ಸಹಾ ಅವರು, “1997ರಲ್ಲಿ ನಾನು ಮೊದಲ ಬಾರಿಗೆ ಕ್ರಿಕೆಟ್ ಮೈದಾನಕ್ಕೆ ಕಾಲಿಟ್ಟೆ. ಇಂದಿಗೆ 28 ವರ್ಷಗಳಾಗಿವೆ ಮತ್ತು ಅದು ದೊಡ್ಡ ಪ್ರಯಾಣವಾಗಿದೆ! ನನ್ನ ದೇಶ, ರಾಜ್ಯ, ಜಿಲ್ಲೆ, ಕ್ಲಬ್‌ಗಳು, ವಿಶ್ವವಿದ್ಯಾನಿಲಯ, ಕಾಲೇಜು ಮತ್ತು ಶಾಲೆಯನ್ನು ಪ್ರತಿನಿಧಿಸುವುದು ನನ್ನ ಜೀವನದ ಶ್ರೇಷ್ಠ ಗೌರವವಾಗಿದೆ' ಎಂದು ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.
"ಈ ಆಟವು ನನಗೆ ಊಹಿಸಲು ಸಾಧ್ಯವಾಗುವುದಕ್ಕಿಂತ ಹೆಚ್ಚಿನದನ್ನು ನೀಡಿದೆ. ಇದು ನನ್ನ ಉತ್ಸಾಹ, ನನ್ನ ಗುರು, ನನ್ನ ಗುರುತು" ಎಂದು 40 ವರ್ಷದ ಬಂಗಾಳದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಬರೆದಿದ್ದಾರೆ. ವೃದ್ಧಿಮಾನ್ 142 ಪ್ರಥಮ ದರ್ಜೆ, 116 ಲಿಸ್ಟ್ ಎ ಮತ್ತು 255 ಟಿ 20 ಪಂದ್ಯಗಳಲ್ಲಿ ಕ್ರಮವಾಗಿ 7,169 ರನ್, 3,072 ರನ್ ಮತ್ತು 4,655 ರನ್ ಗಳಿಸಿದ್ದಾರೆ.
PublicNext
01/02/2025 10:52 pm