ಸೋಮವಾರಪೇಟೆ: ಸೋಮವಾರಪೇಟೆಯ ತಾಲೂಕಿಗೆ ಸಂಬಂಧಪಟ್ಟ ಉಪಾನಂದಾವಣೆ ಕಚೇರಿಯಲ್ಲಿ. ಉಪನಂದಾವಣೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ ಎಂ ಮಹಮದ್ ಅಲಿ ಅವರನ್ನು ಏಕಾಏಕಿ ವರ್ಗಾವಣೆ ಮಾಡಿರುವುದು ಸೋಮುವಾರಪೇಟೆಯ ಸಾರ್ವಜನಿಕರಲ್ಲಿ ಹಾಗೂ ರೈತಾಪಿ ವರ್ಗದ ಜನರಲ್ಲಿ ಆಕ್ರೋಶ ಉಂಟು ಮಾಡಿದೆ. ಇವರು ಸುಮಾರು ಎರಡು ವರ್ಷಗಳ ಕಾಲ ಸೋಮವಾರಪೇಟೆ ತಾಲೂಕಿನ ಸಬ್ ರಿಜಿಸ್ಟರ್ ಆಗಿ ಕಾರ್ಯ ನಿರ್ವಹಿಸಿದ್ದು.ಬಡವರ ಹಾಗು ರೈತರ ಸಮಸ್ಯೆಗೆ ತಕ್ಷಣ ಸ್ಪಂದಿಸಿ ಜನರಲ್ಲಿ ವಿಶ್ವಾಸ ಮೂಡಿಸಿದ್ದರು.ಎರಡು ವರ್ಷದ ಕಾರ್ಯವಾದಿಯಲ್ಲಿ ಜನರಲ್ಲಿ ಏನನ್ನು ಅಪೇಕ್ಷೆ ಪಡದೆ ಜನರಲ್ಲಿ ವಿಶ್ವಾಸ ಮೂಡಿಸಿದ್ದರು. ಇನ್ನೂ ಅವರ ಸ್ವಂತ ಹಣದಿಂದಲೇ ಕಚೇರಿಯ ಒಳಗಡೆ ಬೇಕಾದಂಥ ವಸ್ತುಗಳನ್ನು ತರಿಸಿ ಜನರಿಗೆ ಅನುಕೂಲ ಮಾಡಿಕೊಡುತ್ತಿದ್ದರು. ಇವರು ಕಾರ್ಯ ನಿರ್ವಹಿಸುತ್ತಿದ್ದ ಇಲ್ಲಿಯವರೆಗೂ ಇವರ ವಿರುದ್ಧ ಯಾವೊಂದು ಸಣ್ಣ ದೂರು ಕೂಡ ಸಾರ್ವಜನಿಕರಿಂದ ಬರದಿದ್ದರೂ ಇಂಥ ನಿಷ್ಠಾವಂತ ಹಾಗು ಜನ ಪರ ಕೆಲಸ ಮಾಡುವ ಅಧಿಕಾರಿಗಳಿಗೆ ಈ ರೀತಿ ಮಾಡುವುದು ಸರಿಯಲ್ಲ. ಮಧ್ಯವರ್ತಿಗಳ ಜೇಬು ತುಂಬುತ್ತಿಲ್ಲವೆಂಬ ಕಾರಣಕ್ಕೆ ಬೆರಣಿಕೆ ಯಷ್ಟು ಜನರ ಮಾತಿನ ಕಿಮ್ಮತ್ತಿಗೆ ಮೇಲಾಧಿಕಾರಿಗಳು ತತ್ತ ಕ್ಷಣಕ್ಕೆ ವರ್ಗಾವಣೆ ಮಾಡಿರುವುದು ಬೇಸರದ ಸಂಗತಿ ಎಂದು ರೈತ ಸಂಘಟನೆ ಹಾಗೂ ಸಾರ್ವಜನಿಕರು ಆರೋಪಿಸಿದ್ದಾರೆ.
.
Kshetra Samachara
01/02/2025 06:25 pm