", "articleSection": "Infrastructure", "image": { "@type": "ImageObject", "url": "https://prod.cdn.publicnext.com/s3fs-public/40083620250201022703filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VeereshChikkamangaluru" }, "editor": { "@type": "Person", "name": "9731141698" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಶಿವಮೊಗ್ಗ: ಮಡಿವಾಳ ಮಾಚಿದೇವ 12 ನೇ ಶತಮಾನದಲ್ಲಿ ಜಾತಿ ಪದ್ದತಿಯ ವಿರುದ್ಧ ಹೋರಾಡಿದರು. ಆ ಮೂಲಕ ಸರ್ವರಿಗೂ ಸಮಪಾಲು, ಸಮಬಾಳು ಎಂಬ ಆದರ್ಶದ ಮಾ...Read more" } ", "keywords": "Node,Shimoga,News,Infrastructure", "url": "https://publicnext.com/node" }
ಶಿವಮೊಗ್ಗ: ಮಡಿವಾಳ ಮಾಚಿದೇವ 12 ನೇ ಶತಮಾನದಲ್ಲಿ ಜಾತಿ ಪದ್ದತಿಯ ವಿರುದ್ಧ ಹೋರಾಡಿದರು. ಆ ಮೂಲಕ ಸರ್ವರಿಗೂ ಸಮಪಾಲು, ಸಮಬಾಳು ಎಂಬ ಆದರ್ಶದ ಮಾರ್ಗವನ್ನು ಹಾಕಿಕೊಟ್ಟವರು. ಪ್ರಸ್ತುತ ನಾವೆಲ್ಲರೂ ಅವರ ಜೀವನಾದರ್ಶಗಳನ್ನು ಅನುಸರಿಸಬೇಕು ಎಂದು ಶಾಸಕರಾದ ಎಸ್. ಎನ್. ಚನ್ನಬಸಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಮಡಿವಾಳ ಸಮಾಜ ಸಂಘ ಸಹಯೋಗದೊಂದಿಗೆ ಶನಿವಾರ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಡಿವಾಳ ಮಾಚಿದೇವರು ಯಾವುದೇ ಜಾತಿ, ಜನಾಂಗ, ಧರ್ಮಕ್ಕೆ ಸಿಮೀತವಾಗದೆ ಇಡೀ ಮನುಕುಲದ ಒಳಿತಿಗಾಗಿ ದುಡಿದವರು. ಈ ಸಮಾಜಕ್ಕೆ ಯಾವುದು ಬೇಕು, ಬೇಡ ಎಂಬ ಚಿಂತನೆಯಲ್ಲಿ ತೊಡಗಿಕೊಂಡವರು. ಇದಲ್ಲದೆ ಸದಾ ಶೋಷಿತರು, ಅಸ್ಪೃಶ್ಯರು, ಶಿಕ್ಷಣದಿಂದ ವಂಚಿತರಾದವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದರು. ಮಾಚಿದೇವನು ಕೂಡ ಶಿಕ್ಷಣದಿಂದ ವಂಚಿತರಾದ ಸಮುದಾಯದಿಂದ ಬಂದವರು. ಆದರೆ ಅವರಿಗೆ ಮಲ್ಲಿಕಾರ್ಜುನ ಸ್ವಾಮಿ ಎಂಬ ಗುರು ಶಿಕ್ಷಣ ನೀಡಿದರು. ಅದರಿಂದ ಅವರಿಗೆ 3 ಲಕ್ಷಕ್ಕೂ ಹೆಚ್ಚು ವಚನಗಳನ್ನು ರಚಿಸಲು ಸಾಧ್ಯವಾಯಿತು. ಮಲ್ಲಿಕಾರ್ಜುನ ಸ್ವಾಮಿ ಇಲ್ಲದಿದ್ದರೆ ಮಾಚಿದೇವನಂತಹ ದಾರ್ಶನಿಕನನ್ನು ಈ ಸಮಾಜ ನೋಡುತ್ತಿರಲಿಲ್ಲ. ಗುರುಪರಂಪರೆ ಇಲ್ಲದೆ ಸಮಾಜವನ್ನು ಕಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದರು.
Kshetra Samachara
01/02/2025 02:27 pm