ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಮಾಜಿ ಸಿಎಂ ದೇವರಾಜ ಅರಸು ಭವನ ಕಾಮಗಾರಿ ಸ್ಥಗಿತ- ಜನ ಜಾಗೃತಿ ವೇದಿಕೆ ಆಕ್ರೋಶ

ಶಿವಮೊಗ್ಗ : ಶಿವಮೊಗ್ಗದಲ್ಲಿ‌‌ ನಿರ್ಮಾಣವಾಗುತ್ತಿರುವ ದೇವರಾಜ್ ಅರಸು ಭವನ ಕಾಮಗಾರಿ ನಿಂತಲ್ಲೇ ನಿಂತಿದೆ. ಇದ್ರಿಂದ ಆಕ್ರೋಶಗೊಂಡ ಹಿಂದುಳಿದ ಜನ ಜಾಗೃತಿ ವೇದಿಕೆ ಕಾರ್ಯಕರ್ತರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಹೌದು, ಶಿವಮೊಗ್ಗ ನಗರದ ಸರ್ವಜ್ಞ ವೃತ್ತದಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿರುವ ದೇವರಾಜ್‌ ಅರಸು ಭವನ ಕಳೆದ ನಾಲ್ಕೈದು ವರ್ಷದಿಂದ ಮಂದಗತಿಯಲ್ಲಿ ಕಾಮಗಾರಿ ಸಾಗ್ತಿದೆ. ಬಹು ನಿರೀಕ್ಷಿತ ಭವನದ ಕಾಮಗಾರಿ ಕುಂಟುತ್ತಾ ಸಾಗುತ್ತಿರುವುದು ಹಿಂದುಳಿದ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಮಾಜಿ ಸಿಎಂ ಬಡವರ ಬಂಧು ದೇವರಾಜ ಅರಸು ಹೆಸರಿನಲ್ಲಿ ನಿರ್ಮಾಣವಾಗ್ತಿರುವ ಭವನಕ್ಕೆ ಇಷ್ಟೊಂದು ವಿಳಂಬ ಧೋರಣೆ ಏಕೆ!? ಸದ್ಯ ಕಾಮಗಾರಿ ನಿಂತು ಹೋಗಿದ್ದು ಭವನ ಪಾಳುಬಿದ್ದಂತಾಗಿದೆ. ಈ ಕೂಡಲೇ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಗಮನ ಹರಿಸಿ ಕೂಡಲೇ ಕಾಮಗಾರಿ ಆರಂಭ ಮಾಡಬೇಕು ಎಂದು ಹಿಂದುಳಿದ ಜನ ಜಾಗೃತಿ ವೇದಿಕೆ ಸಂಚಾಲಕರು, ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಬಹುಕೋಟಿ ವೆಚ್ಚದ ದೇವರಾಜ ಅರಸು ಭವನ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳಿಸಬೇಕು. ಈ ವರ್ಷ ಅರಸು ಅವರ ಜನ್ಮ ದಿನವನ್ನು ಅದೇ ಭವನದಲ್ಲಿ ಆಚರಿಸಬೇಕು. ಇಲ್ಲದಿದ್ರೆ, ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಹಿಂದುಳಿದ ನಾಯಕರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

-ವೀರೇಶ್‌ ಜಿ.ಹೊಸೂರ್‌, ಪಬ್ಲಿಕ್‌ ನೆಕ್ಸ್ಟ್ ಶಿವಮೊಗ್ಗ

Edited By : Vinayak Patil
Kshetra Samachara

Kshetra Samachara

31/01/2025 06:54 pm

Cinque Terre

2.02 K

Cinque Terre

0

ಸಂಬಂಧಿತ ಸುದ್ದಿ