ಶಿವಮೊಗ್ಗ : ತೀರ್ಥಹಳ್ಳಿ ತಾಲೂಕಿನ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡೆ ಬೈಲು ನಲ್ಲಿ ಇತ್ತೀಚೆಗೆ ಮಹಿಳೆ ಯೊಬ್ಬರಿಗೆ ಮಂಗನ ಕಾಯಿಲೆ ಕಂಡು ಬಂದ ಬೆನ್ನಲ್ಲೇ ಮತ್ತೆರಡು ಶಂಕಿತ ಕೆಎಪ್ ಡಿ ಪಾಸಿಟಿವ್ ಬಗ್ಗೆ ತಾಲೂಕಿನ ಕಟಗಾರು ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯ ಹೆದ್ದೂರಿನಲ್ಲಿ ಇಬ್ಬರು ಕೂಲಿ ಕಾರ್ಮಿಕ ಮಹಿಳೆಯರಲ್ಲಿ ಕೆಎಫ್‌ಡಿ ಸೋಂಕು ತಗುಲಿರುವುದು ಧೃಡವಾಗಿದೆ.
ಸದ್ಯ ಅವರು ಆರೋಗ್ಯ ಸ್ಥಿರವಾಗಿದ್ದು ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಜ್ವರದ ಕಾರಣಕ್ಕೆ ಜೆಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ರುವ 15 ಮಂದಿಯ ರಕ್ತವನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜೆಸಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗಣೇಶ್ ಭಟ್ ತಿಳಿಸಿದ್ದಾರೆ.
PublicNext
31/01/2025 08:16 pm