ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ಸ್ವತಂತ್ರ ಹೋರಾಟಗಾರರ ಬದುಕು ನಮಗೆ ಸ್ಪೂರ್ತಿ - ಚಂದನ್ ಪಾಲ್

ಶಿವಮೊಗ್ಗ : ಈಸೂರಿನ ಹೋರಾಟಗಾರರ ಸ್ವಾತಂತ್ರ್ಯದ ಕೂಗು ಇಡೀ ದೇಶಾದ್ಯಂತ ಪ್ರತಿಧ್ವನಿಸಿತ್ತು. ದೇಶದಲ್ಲಿ ಮೊದಲು ಸ್ವಾತಂತ್ರ್ಯ ಘೋಷಿಸಿಕೊಂಡ ಊರು ಈಸೂರು ಗ್ರಾಮ ಎಂದು ಅಖಿಲ ಭಾರತ ಸರ್ವೋದಯ ಮಂಡಲದ ಅಧ್ಯಕ್ಷ ಚಂದನ್ ಪಾಲ್ ಹೇಳಿದರು.

ಈಸೂರಿನ ಹುತಾತ್ಮರ ಸ್ಮಾರಕದ ಆವರಣದಲ್ಲಿ ಸರ್ವೋದಯ ಮಂಡಲ ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನ ಮತ್ತು ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶ ಸ್ವಾತಂತ್ರ್ಯವಾಗಲು ಲಕ್ಷಾಂತರ ಹೋರಾಟಗಾರರು ಹುತಾತ್ಮವಾಗಿದ್ದಾರೆ. ಅವರೆಲ್ಲರ ಹೋರಾಟದ ಬದುಕು ನಮಗೆ ಸ್ಪೂರ್ತಿ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಪಾಟೀಲ್ ಮಾತನಾಡಿ, ಗ್ರಾಮದಲ್ಲಿ ಸರ್ವೋದಯ ಮಂಡಲ ವತಿಯಿಂದ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಿನಂದನೀಯ. ಸ್ವಾತಂತ್ರ್ಯ ಹೋರಾಟ ಮತ್ತಷ್ಟು ಬಲಿಷ್ಠವಾಗಲು ಪ್ರೇರಣೆ ನೀಡಿದ ಗ್ರಾಮ

ಈಸೂರು ಎಂದು ಹೇಳಿದರು.

ಕರ್ನಾಟಕ ಸರ್ವೋದಯ ಮಂಡಲದ ಅಧ್ಯಕ್ಷ ಡಾ. ಸುರೇಶ್ ಮಾತನಾಡಿ, ಸಮಾನತೆ ಮತ್ತು ಸಹೃದಯತೆ ಬೆಳೆಸುವುದೇ ಪ್ರಮುಖ ಉದ್ದೇಶ. ಸರ್ವೋದಯದ ಸಂದೇಶಗಳು ಪ್ರತಿ ಮನೆಗೂ ತಲುಪಬೇಕು ಎಂದು ತಿಳಿಸಿದರು.

Edited By : PublicNext Desk
Kshetra Samachara

Kshetra Samachara

01/02/2025 12:56 pm

Cinque Terre

260

Cinque Terre

0

ಸಂಬಂಧಿತ ಸುದ್ದಿ