ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಮಲ್ಲಿಕಾರ್ಜುನ ಖರ್ಗೆ 2 ವರ್ಷದ ಹುಡುಗನ ರೀತಿ ವರ್ತಿಸುತ್ತಿದ್ದಾರೆ - ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಯಸ್ಸು 80+ ಆಗಿದೆ. ಆದರೆ 2 ವರ್ಷದ ಹುಡುಗನ ರೀತಿ ವರ್ತಿಸುತ್ತಿದ್ದಾರೆ. ಹಿಂದೂ ಸಮಾಜದ ಮೇಲೆ ಯಾಕೆ ನಿಮಗೆ ಚಿಂತೆ ಎಂದು ಕೆ.ಎಸ್ ಈಶ್ವರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು ಈ ಸಮಾಜದಲ್ಲಿ ಪುಣ್ಯ ಕ್ಷೇತ್ರದ ಬಗ್ಗೆ, ಹಸು ಬಗ್ಗೆ, ನದಿ ಬಗ್ಗೆ ಹಗುರವಾಗಿ ಮಾತನಾಡುವ ಅನೇಕರು ಕಾಂಗ್ರೆಸ್‌ನಲ್ಲಿದ್ದಾರೆ. ಮೋದಿ ಬಗ್ಗೆ ಅಮಿತ್ ಶಾ ಬಗ್ಗೆ ಟೀಕೆ ಮಾಡಲು ನೀವು ಯಾರು? ಇಡೀ ಹಿಂದೂ ಸಮಾಜದ ಬಗ್ಗೆ, ನಮ್ಮ ತೀರ್ಥ ಕ್ಷೇತ್ರದ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದರು. ಎರಡು ವರ್ಷದ ಮಗು ಹಾಡಿದ ಹಾಗೇ ಆಡಬೇಡಿ. ನಿಮಗೆ ಎರಡು ವರ್ಷ ಮಗು ಆಗಿದ್ರೆ ಹೊಡೆದುಬಿಡುತ್ತಿದ್ದೆ. ದಯವಿಟ್ಟು ಖರ್ಗೆಯವರೇ ಟೀಕೆ ಮಾಡಬೇಡಿ. ಮುಸ್ಲಿಂ ಮತಕ್ಕಾಗಿ ಇಷ್ಟು ಕೀಳು ಮಟ್ಟಕ್ಕೆ ಇಳಿದಿರೋದು ಸರಿಯಲ್ಲ. ನೀವು ದೊಡ್ಡ ರಾಜಕಾರಣಿ. ನೀವು ಬಾಯಿ ಮುಚ್ಚಿಕೊಂಡು ಇರಿ ಅಂತಾ ಹೇಳಬೇಕಾಗುತ್ತದೆ ಎಂದರು.

Edited By : Somashekar
PublicNext

PublicNext

31/01/2025 05:18 pm

Cinque Terre

18.63 K

Cinque Terre

0

ಸಂಬಂಧಿತ ಸುದ್ದಿ