", "articleSection": "Law and Order,Government", "image": { "@type": "ImageObject", "url": "https://prod.cdn.publicnext.com/s3fs-public/387839-1738294464-Untitled-design---2025-01-31T090349.733.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ರೌಡಿಗಳು ಮತ್ತು ಕ್ರಿಮಿನಲ್‌ಗಳಿಗೆ ಬೆಂಗಳೂರು ಪೊಲೀಸ್ ಕಮಿಷನರ್ ಸಿಂಹ ಸ್ವಪ್ನವಾಗಿದ್ದಾರೆ. ಬಿ. ದಯಾನಂದ್ ಅವರು ಬೆಂಗಳೂರು ಕಮಿಷನರ್...Read more" } ", "keywords": "Bengaluru, Dayanand Commissioner, Admel Gang, Crime Rate, Rowdy Elements, Karnataka Police, Law and Order, Jail Term, Underworld Activities.,Bangalore,Law-and-Order,Government", "url": "https://publicnext.com/node" } ಬೆಂಗಳೂರು: ದಯಾನಂದ್ ಕಮಿಷನರ್ ಆದ್ಮೇಲೆ ಗನ್‌ಗಿಂತ ಪೆನ್ ಸೌಂಡೇ ಜಾಸ್ತಿ - ವರ್ಷದಿಂದ ಜೈಲಲ್ಲೆ ಇದ್ದಾರೆ 100ಕ್ಕೂ ಹೆಚ್ಚು ರೌಡಿಗಳು!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದಯಾನಂದ್ ಕಮಿಷನರ್ ಆದ್ಮೇಲೆ ಗನ್‌ಗಿಂತ ಪೆನ್ ಸೌಂಡೇ ಜಾಸ್ತಿ - ವರ್ಷದಿಂದ ಜೈಲಲ್ಲೆ ಇದ್ದಾರೆ 100ಕ್ಕೂ ಹೆಚ್ಚು ರೌಡಿಗಳು!

ಬೆಂಗಳೂರು: ರೌಡಿಗಳು ಮತ್ತು ಕ್ರಿಮಿನಲ್‌ಗಳಿಗೆ ಬೆಂಗಳೂರು ಪೊಲೀಸ್ ಕಮಿಷನರ್ ಸಿಂಹ ಸ್ವಪ್ನವಾಗಿದ್ದಾರೆ. ಬಿ. ದಯಾನಂದ್ ಅವರು ಬೆಂಗಳೂರು ಕಮಿಷನರ್ ಆದ್ಮೇಲೆ ರೌಡಿಗಳ ಬಾಲ ಕಟ್ ಮಾಡಿ ಮೂಲೆಗೆ ಕೂರಿಸಿದ್ದಾರೆ.

ದಯಾನಂದ್ ಕಮಿಷನರ್ ಆದ್ಮೇಲೆ ಗನ್‌ಗಿಂತ್ ಪೆನ್ ಸೌಂಡ್ ಮಾಡಿದ್ದೆ ಹೆಚ್ಚು,. ಇವರು ಕಮಿಷನರ್ ಆಗಿ ಸುಮಾರು ಎರಡು ವರ್ಷ ಆದ್ರೂ ನಗರಲ್ಲಿ ಇಬ್ಬರು ಕ್ರಿಮಿನಲ್‌ಗಳಿಗಷ್ಟೇ ಗುಂಡೇಟು ಬಿದ್ದಿರೋದು.

ದಯಾನಂದ್ ಕಮಿಷನರ್ ಆದ ಕಳೆದ ಒಂದೇ ವರ್ಷದಲ್ಲಿ 100ಕ್ಕೂ ಹೆಚ್ಚು ರೌಡಿಗಳು ಜೈಲಿನಲ್ಲೆ ಕೂಳಿತಿದ್ದಾರೆ. ಹೌದು... 2024ರಲ್ಲಿ ನಗರದಲ್ಲಿ 100ಕ್ಕೂ ಹೆಚ್ಚು ರೌಡಿಗಳ ಮೇಲೆ ಕೋಕಾ ಕಾಯ್ದೆ ಜಾರಿಯಾದ್ರೆ, 15ಕ್ಕೂ ಹೆಚ್ಚು ಜನರ ಮೇಲೆ ಗೂಂಡಾ ಕಾಯ್ದೆ ಹಾಗೂ 6 ಡ್ರಗ್ ಪೆಡ್ಲರ್‌ಗಳ ಮೇಲೆ ಪಿಟ್‌.ಎನ್.ಡಿ ಪಿಎಸ್ ಆ್ಯಕ್ಟ್ ಜಾರಿಯಾಗಿದೆ.

ಕಮಿಷನರ್ ದಯಾನಂದ್ ಅವರು ವೈಲೆಂಟ್‌ಗಿಂತ ಸೈಲೆಂಟ್ ಆಗೆ ಹೆಚ್ಚಾಗಿ ಸೌಂಡ್ ಮಾಡಿದ್ದಾರೆ. ರೌಡಿಗಳಿಗೆ ಗುಂಡು ಹೊಡೆದ್ರೆ ಅವ್ರು ಬುದ್ದಿ ಕಲಿಯಲ್ಲ, ಸಾಲದಕ್ಕೆ ಬೇಲ್ ತಗೊಂಡು ಮತ್ತೆ ಹೊರಗಡೆ ಬಂದು ಹಳೇ ಚಾಳಿ ಮುಂದುವರೆಸುತ್ತಾರೆ ಅನ್ನೋದು ಅವರ ಮಾತು..

ಇದೇ ಕಾರಣಕ್ಕೆ ಸೀರಿಯಲ್ ಕ್ರಿಮಿನಲ್‌ಗಳ ಮೇಲೆ ಕೋಕಾ, ಗೂಂಡಾ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಕೋಕಾ, ಗೂಂಡಾ ಅಸ್ತ್ರದಿಂದ ವರ್ಷದಿಂದ ಜೈಲಿನಲ್ಲಿ ರೌಡಿಶೀಟರ್‌, ಕ್ರಿಮಿನಲ್‌ಗಳು ಗಪ್‌ಚುಪ್‌ ಕೂಳಿತಿದ್ದಾರೆ. ಈ ಕಾರಣಕ್ಕೆ ಸಿಲಿಕಾನ್ ಸಿಟಿಯಲ್ಲಿ ರೌಡಿ ಉಪಟಳಕ್ಕೆ ಬ್ರೇಕ್ ಬಿದ್ದಿದೆ ಅಂದ್ರು ತಪ್ಪಾಗಲ್ಲ.

ಅಲ್ಲಲ್ಲಿ ಕೆಲ ಸಣ್ಣಪುಟ್ಟ ರೌಡಿಗಳು ಬಾಲ ಬಿಚ್ಚುತ್ತಿದ್ದು, ಈ ವರ್ಷ ಮತ್ತಷ್ಟು ಪುಡಿ ರೌಡಿಗಳ ಕೋಕಾ, ಗೂಂಡಾ ಕಾಯ್ದೆ ಜಾರಿ ಮಾಡಲು ಚಿಂತನೆ ನಡೆಸಿದ್ದಾರೆ. ಈಗಾಗ್ಲೇ ಏರಿಯಾಗಳಲ್ಲಿ ಆಕ್ಟೀವ್ ಆಗಿರೋ ರೌಡಿಗಳ ಮಾಹಿತಿ ಕಲೆ ಹಾಕಲು ಸಿಸಿಬಿ ಹಾಗೂ ಠಾಣಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ಯಂತೆ.

Edited By : Abhishek Kamoji
PublicNext

PublicNext

31/01/2025 09:04 am

Cinque Terre

9.13 K

Cinque Terre

0

ಸಂಬಂಧಿತ ಸುದ್ದಿ