ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಯತ್ನಾಳ್ ಮತ್ತೆ ಕಿಡಿ ಕಾರಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಅವರ ಒರಿಜಿನಲ್ ಬಣ್ಣ ಬಯಲಾಗ್ತಾ ಇದೆ. ಜಿಲ್ಲಾಧ್ಯಕ್ಷರ ನೇಮಕ ಹೇಗೆ ಆಗಿದೆ ಎಲ್ಲಾ ವಿಚಾರಗಳೂ ಗೊತ್ತಾಗ್ತಾ ಇವೆ, ವಿಜಯೇಂದ್ರ ಅವರಿಗೆ ಸಲಹೆ ಕೊಡ್ತೀನಿ ಯಾಕೆ ಸುಮ್ನೆ ಸರ್ಕಸ್ ಮಾಡ್ತೀರಿ.
ನೇರವಾಗಿ ರಾಧಾ ಮೋಹನ್ ದಾಸ್ ಅವರ ಬಳಿ ಮಾತಾಡಿ ರಾಜ್ಯಾಧ್ಯಕ್ಷ ಅಂತ ಕೈ ಎತ್ತಿಬಿಡಿ. ಸುಮ್ಮನೆ ಯಾಕೆ ಈ ಚುನಾವಣಾ ಸರ್ಕಸ್ ಎಲ್ಲಾ ಎಂದು ಕಿಡಿ ಕಾರಿದ್ರು.
ಕಾರಜೋಳರನ್ನ ಹೊಡೆಯಲು ಹೋದವರನ್ನ ನೀವು ಜಿಲ್ಲಾಧ್ಯಕ್ಷರನ್ನಾಗಿ ಮಾಡ್ತೀರಾ ಅಂದ್ರೆ ಎಲ್ಲಿಗೆ ಹೋಗ್ತಿದೆ ಈ ಪಕ್ಷ , ನೀವು ಪಕ್ಷ ಕಟ್ಟಬೇಕು ಅಂತಿದ್ದೀರೋ ಅಥವಾ ಪ್ರೈವೇಟ್ ಕಂಪನಿ ಮಾಡಬೇಕು ಅಂತಿದ್ದೀರೋ, ನಿಮ್ಮ ಅಣ್ಣಾ ( ರಾಘವೇಂದ್ರ ) ರನ್ನ ಕೇಂದ್ರ ಸಚಿವ ಮಾಡಿ ತಂದೆ( ಯಡಿಯೂರಪ್ಪ ) ಅವರನ್ನ ಉಪರಾಷ್ಟ್ರಪತಿ ಮಾಡಿ ಎಂದು ವ್ಯಂಗ್ಯವಾಡಿದರು.
PublicNext
30/01/2025 08:55 pm