ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮುಡಾ ಅಕ್ರಮದಲ್ಲಿ ಮನಿಲ್ಯಾಂಡ್ರಿಂಗ್ ಬಗ್ಗೆ ಮುಡಾಗೆ ಪತ್ರ ಬರೆದ ಇಡಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಅಕ್ರಮ ಆರೋಪ ಪ್ರಕರಣದಲ್ಲಿ , ಜಾರಿ ನಿರ್ದೇಶನಾಲಯ ಮನಿಲ್ಯಾಂಡ್ರಿಂಗ್ ಆಗಿರೋ ಬಗ್ಗೆ ವರದಿ ತಯಾರಿಸಿ, ಮುಡಾ ಆಯುಕ್ತರು , ಮುಡಾದಲ್ಲಿನ ಸಬ್ ರಿಜಿಸ್ಟರ್ ಹಾಗೂ ಮೈಸೂರಿನ ನಾಲ್ಕು ಸಬ್ ರಿಜಿಸ್ಟರ್ ಕಚೇರಿಗೆ 104 ಪುಟಗಳ ಪತ್ರ ಬರೆದಿದೆ. ಪತ್ರದಲ್ಲಿ ಯಾರ್ಯಾರ ರೋಲ್ ಏನು..? ಹೇಗೆಲ್ಲಾ ಅಕ್ರಮ ನಡೆದಿದೆ ಅಂತಾ ಉಲ್ಲೇಖಿಸಿದ್ದು, 160 ಸೈಟ್‌ಗಳನ್ನ ಯಾವುದೇ ಪರಭಾರೆ ಮಾಡದಂತೆ ಸೂಚಿಸಿದೆ.

ಇಡಿ ವರದಿಯಲ್ಲಿ ಇರೋದೇನು ಅಂತ ನೋಡೋಡಾದ್ರೆ..!

* ಕೆಸರೆ ಗ್ರಾಮದ 3 ಎಕರೆ 26 ಗುಂಟೆ ಜಮೀನನ್ನ 3.24 ಲಕ್ಷ ರೂಗೆ ವಶಪಡಿಸಿಕೊಳ್ಳಲಾಗಿದೆ,

* ತಪ್ಪು‌ ಮಾಹಿತಿ ಹಾಗೂ ಪ್ರಭಾವದಿಂದಾಗಿ ಡಿನೋಟಿಫಿಕೇಷನ್ ಕೈಬಿಡಲಾಗಿತ್ತು,

* ಮುಡಾ ಸೈಟ್ ಮಾಡಿ ಮಾರಾಟ ಮಾಡಿದ್ದ ಜಾಗವನ್ನ ಮಲ್ಲಿಕಾರ್ಜುನ್ ಸ್ವಾಮೀಯಿಂದ ಖರೀದಿ ಮಾಡಲಾಗಿದೆ,

* ಮಲ್ಲಿಕಾರ್ಜುನ್ ಸ್ವಾಮೀ ಖರೀದಿ ಮಾಡಿದಾಗ ಮುಡಾ ಯಾವುದೇ ಆಕ್ಷೇಪ ಮಾಡಿಲ್ಲ,

* ಮುಡಾದಿಂದ ತಪ್ಪು ವರದಿ ಆಧರಿಸಿ ಮಲ್ಲಿಕಾರ್ಜುನ್ ಸ್ವಾಮೀ ಭಾಗವನ್ನು ರೆಸಿಡೆನ್ಸಿಯಲ್ ಜಾಗವಾಗಿ ಮಾರ್ಪಾಡು ಮಾಡಲಾಗಿದೆ.

* ರಾಜಕೀಯ ಪ್ರಭಾವದಿಂದಾಗಿ ಐಷಾರಾಮಿ ಬಡಾವಣೆಯಲ್ಲಿ ಬದಲಿ ಸೈಟ್‌ಗಳನ್ನ ಬಿ.ಎಂ.ಪಾರ್ವತಿ ಪಡೆದಿದ್ದಾರೆ,

* ಮುಡಾದಿಂದ ಕಾನೂನು ಬಾಹಿರವಾಗಿ ಪರಿಹಾರ ಸೈಟ್ ಪಡೆಯಲಾಗಿದೆ.

* ಮುಡಾ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಸೈಟ್ ಪಡೆಯಲಾಗಿದೆ.

* ಡಿ.ಬಿ.ನಟೇಶ್ ಮುಡಾ ಆಯುಕ್ತರಾಗಿದ್ದ ವೇಳೆಯಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದೆ.

* ಇಡಿ ತನಿಖೆಯಲ್ಲಿ ಪಿಎಂಎಲ್ಎ ಕಾಯಿದೆ ಸೆ. 3 ರಡಿ ಮನಿಲ್ಯಾಂಡ್ರಿಂಗ್ ನಡೆದಿರುವುದು ಸ್ಪಷ್ಟ ವಾಗಿದೆ

* ಇಡಿ ತನಿಖೆಯಲ್ಲಿ ಸಿದ್ದರಾಮಯ್ಯ, ಬಿ.ಎಂ.ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ ಹಾಗೂ ಜೆ.ದೇವರಾಜು ಆರೋಪಿಗಳಾಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

Edited By : Abhishek Kamoji
PublicNext

PublicNext

30/01/2025 07:48 pm

Cinque Terre

8.97 K

Cinque Terre

0

ಸಂಬಂಧಿತ ಸುದ್ದಿ