ಬೆಂಗಳೂರು: ಅಮಾಯಕ ಜನರಿಗೆ ಕೋಟ್ಯಾಂತರ ರೂ. ವಂಚನೆ ಮಾಡಿರೋ ರೇಖಾಳ ಬಂಡವಾಳ ಮತ್ತಷ್ಟೂ ಬಯಲಾಗಿದೆ. 2017 ರಿಂದಲೂ ರೇಖಾಗೆ ಇದೇ ಕೆಲಸ ಅನ್ನೋದು ಗೊತ್ತಾಗಿದ್ದು, ಆಗಲೇ ಮಹಿಳೆಯೊಬ್ಬರಿಗೆ 1 ಕೋಟಿ ವಂಚಿಸಿದ್ಲಂತೆ. ಇನ್ನು ರೇಖಾ ನಕಲಿ ದಾಖಲೆ, ನಕಲಿ ಆಡಿಟರ್ ನೂ ಸೃಷ್ಟಿ ಮಾಡಿ ಜನರಿಗೆ ಯಾಮಾರಿಸ್ತಿದ್ದ ವಿಚಾರ ಬಯಲಾಗಿದೆ.
ಐಶ್ವರ್ಯ ಗೌಡ, ಶ್ವೇತಾ ಗೌಡ ವಂಚನೆ ಕಹಾನಿ ಬಳಿಕ ಬೆಂಗಳೂರಲ್ಲಿ ರೇಖಾ ವಂಚನೆ ಕಥೆಯೂ ಬಯಲಾಗಿತ್ತು. ಕಾರ್ಲ್ಟನ್ ಟವರ್ ಹೆಸರಲ್ಲಿ ಜನರಿಗೆ ಕೋಟಿ ಕೋಟಿ ವಂಚಿಸಿದ್ದ ರೇಖಾ ಕೊನೆಗೆ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ಲು. ಆದ್ರೆ ರೇಖಾ ವಂಚನೆ ಕಥೆಗಳು ನಿನ್ನೆ ಮೊನ್ನೆಯದಲ್ಲ. 2017 ರಲ್ಲೇ ರೇಖಾ ಮನೆ ಕೊಡಿಸ್ತೀನಿ ಅಂತ ಮಹಿಳೆಯೊಬ್ಬರಿಗೆ 1 ಕೋಟಿ ರೂ. ದೋಖಾ ಮಾಡಿದ್ಲಂತೆ.
ಮನೆ ಕೊಡಿಸ್ತೀನಿ, ಸೈಟ್ ಕೊಡಿಸ್ತೀನಿ, ಸಾಲ ಕೊಡಿಸ್ತೀನಿ ಅಂತ ಬಣ್ಣ ಬಣ್ಣದ ಕಥೆ ಹೇಳ್ತಿದ್ದ ರೇಖಾ ತಾನೊಬ್ಬ ಅಡ್ವೊಕೇಟ್ ಅಂತಾನೂ ಸುಳ್ಳು ಹೇಳಿದ್ಲು. ಈಕೆ ಮಾತು ನಂಬಿದ್ದ ಮಹಿಳೆ ಮನೆ ಸಿಗುತ್ತೆ ಅನ್ನೋ ಆಸೆ ಹೊತ್ತು ಸಾಲ-ಸೋಲಾ ಮಾಡಿ 1 ಕೋಟಿ ಕೊಟ್ಟಿದ್ರು. ಇದಕ್ಕೆ ಬದಲಾಗಿ ರೇಖಾ 2 ಚೆಕ್ ಕೊಟ್ಟಿದ್ಲು. ಆದ್ರೆ ಚೆಕ್ ಕೂಡ ಬೌನ್ಸ್ ಆಗಿತ್ತು. ಕೊನೆಗೆ ಮಹಿಳೆ ರೇಖಾ ವಿರುದ್ಧ ಕೆ.ಆರ್.ಪುರಂ ಠಾಣೆಗೆ ದೂರು ನೀಡಿದ್ರು. ಸದ್ಯ ನ್ಯಾಯಕ್ಕಾಗಿ ಮತ್ತೆ ಆ ಮಹಿಳೆ ಸಿಸಿಬಿ ಮೆಟ್ಟಿಲೇರಿದ್ದಾಳೆ.
ಇನ್ನು ರೇಖಾ ವಂಚನೆ ಮಾಡಲು ನಕಲಿ ದಾಖಲೆಗಳನ್ನ ಸೃಷ್ಟಿ ಮಾಡ್ತಿದ್ಲು. ತನ್ನ ಅಕೌಂಟ್ ನಲ್ಲಿ 6 ಕೋಟಿ ಇದೆ ಅಂತ ಫೋಟೋ ತೋರಿಸಿ ಯಾಮಾರಿಸ್ತಿದ್ಲು. ತನ್ನ ಸಹಚರ ಚೇತನ್ ನನ್ನ ಆಡಿಟರ್ ಅಂತ ಪರಿಚಯಸ್ಥರನ್ನ ನಂಬಿಸಿ ಮೋಸ ಮಾಡ್ತಿದ್ಲು. ಇನ್ನು ಇಡಿ, ಐಟಿ, ಸಿಐಡಿ, ಸಿಸಿಬಿ ಕಚೇರಿಗೆ ಪರಿಚಯಸ್ಥರನ್ನ ಕರೆದೊಯ್ತಿದ್ದ ರೇಖಾ ಅಲ್ಲಿಯೂ ತನ್ನ ಬಳಿ ಹಣ ಇದೇ ಅನ್ನೋ ತರ ನಂಬಿಕೆ ಬರುವಂತೆ ಮಾಡ್ತಿದ್ಲು. ಹೀಗೆ ಬಣ್ಣ ಬಣ್ಣವಾಗಿ ಜನರನ್ನ ಯಾಮಾರಿಸುತಿದ್ದ ರೇಖಾಳ ಇಂತಹ ವಂಚನೆಗೆಲ್ಲ ಗಂಡ ಮಂಜುನಾಥಚಾರಿ ಕೂಡ ಸಾಥ್ ನೀಡ್ತಿದ್ನಂತೆ. ಸದ್ಯ ಈಕೆ ವಿರುದ್ಧ ಮತ್ತಷ್ಟು ಜನರು ಸಿಸಿಬಿಗೆ ದೂರು ನೀಡ್ತಿದ್ದು, ವಂಚನೆ ಮಾಡಿದ ಹಣ ಎಲ್ಲಿದೆ ಅನ್ನೋದನ್ನ ಪತ್ತೆ ಮಾಡೋದೇ ಸವಾಲಾಗಿದೆ.
PublicNext
30/01/2025 10:49 pm