ಮೈಸೂರು : ರಾಜ್ಯದಲ್ಲಿ ಗೋವಿನ ಮೇಲಿನ ದಾಳಿ ಹಾಗೂ ಹಲ್ಲೆಯ ಪ್ರಕರಣಗಳು ದಿನೇ ದಿನೇ ಬೆಳಕಿಗೆ ಬರುತ್ತಲೇ ಇದೆ. ಇತ್ತೀಚೆಗೆ ಕಾರವಾರದಲ್ಲಿ ಗರ್ಭಿಣಿ ಹಸುವಿನ ಹತ್ಯೆ, ಮಾತ್ರವಲ್ಲ, ಬೆಂಗಳೂರಿನ ಚಾಮರಾಪೇಟೆಯಲ್ಲಿ ಹಸುಗಳ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆಯಲಾಗಿತ್ತು. ಇದೀಗ ದೇವರಿಗೆ ಹರಕೆಗೆ ಬಿಟ್ಟಿರುವ ಗೂಳಿಯೊಂದಕ್ಕೆ ಮಚ್ಚಿನಿಂದ ಹೊಡೆದು ಗಾಯಗೊಳಿಸಿರುವ ಪ್ರಕರಣವೊಂದು ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.
ಗ್ರಾಮದ ದೇವರಿಗೆ ಹರಕೆ ಬಿಟ್ಟಿದ್ದ ಗೂಳಿಗೆ ಮಚ್ಚಿನಿಂದ ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ. ಮೈಸೂರು ಜಿಲ್ಲೆಯ ಜಯಪುರ ಹೋಬಳಿಯ ಹನಗಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಹರಕೆಗೆ ಬಿಟ್ಟಿರುವ ಗೂಳಿಗೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ನಿನ್ನೆ ಸಂಜೆ ಮೈಸೂರು ತಾಲೂಕಿನ ಜಯಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
30/01/2025 07:05 pm