ಮೈಸೂರು : ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಬಸವೇಶ್ವರ ಕಾಲೋನಿಯಲ್ಲಿ ಫೈನಾನ್ಸ್ ಕಿರುಕುಳಕ್ಕೆ ಮತ್ತೊಂದು ಬಲಿಯಾಗಿರುವ ಆರೋಪ ಕೇಳಿ ಬಂದಿದ್ದು, ವಿಷ ತೆಗೆದುಕೊಂಡು ಕೂಲಿ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 37 ವರ್ಷದ ಸುಬ್ರಮಣ್ಯ ಎಂಬುವವರೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಎಚ್ ಎಫ್ ಸಿ ಎಲ್ ಫೈನಾನ್ಸ್ ನಲ್ಲಿ 6 ಲಕ್ಷ ಸಾಲ ಹಾಗೂ ಕೈ ಸಾಲ ಮಾಡಿಕೊಂಡಿದ್ದ ಸುಬ್ರಮಣ್ಯ ಅವ್ರು, ಆಧಾರ್ ಕಾರ್ಡ್ ಮೂಲಕ ಸಾಲ ಪಡೆದಿದ್ರು. ಕೂಲಿ ಕೆಲಸ ಮಾಡುತ್ತಿದ್ದ ಸುಬ್ರಮಣ್ಯ ಪಿರಿಯಾಪಟ್ಟಣ ನಿವಾಸಿಯಾಗಿದ್ದು, ಸಾಲ ತೀರಿಸಲಾಗದೆ ಸಮಸ್ಯೆಗೆ ಸಿಲುಕಿದ್ರು ಎನ್ನಲಾಗಿದೆ. ಸುಬ್ರಮಣ್ಯ ಮನೆ ಮೇಲೆ ಸಾಲದ ಬಗ್ಗೆ ಫೈನಾನ್ಸ್ ಸಿಬ್ಬಂದಿ ಬರೆದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಆರೋಪಿಸಲಾಗಿದೆ. ಸದ್ಯ ಸ್ಥಳಕ್ಕೆ ಬೆಟ್ಟದಪುರ ಪೊಲೀಸರು ಭೇಟಿ ಕೊಟ್ಟಿದ್ದು, ತನಿಖೆ ಮುಂದುವರೆಸಿದ್ದಾರೆ.
PublicNext
30/01/2025 04:52 pm