ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದರ್ : ಅಪರಿಚಿತ ವಾಹನ ಡಿಕ್ಕಿ - ಪಾದಚಾರಿ ಮೃತ್ಯು

ಬೀದರ್ : ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬ ಮೃತಪಟ್ಟ ಘಟನೆ ಹುಮನಾಬಾದ್ ತಾಲ್ಲೂಕಿನ ಧೂಮ್ಮನಸುರ್ ಗ್ರಾಮದ ಹತ್ತಿರ ನಡೆದಿದೆ. ದುಬಲಗುಂಡಿ ಗ್ರಾಮದ ನಿವಾಸಿಯಾದ ಅನಿಲ್ ಚಿಂಚೋಳಿಕರ್ (38) ಮೃತ ವ್ಯಕ್ತಿ ಎಂದು ತಿಳಿದುಬಂದಿದೆ.

ಪತಿ ಗಂಡ ಪ್ಲಂಬರ್ ಕೆಲಸ ಮಾಡಲು ಹುಮನಾಬಾದಗೆ ಹೋಗಿದ್ದರು. ಹುಮನಾಬಾದ್ ನಿಂದ ಬೀದರ್ ಹೋಗುವ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ನನ್ನ ಪತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈ ಘಟನೆ ನಡೆದ ಬಗ್ಗೆ ದಾರಿ ಹೋಕರು ನನಗೆ ಕರೆ ಮಾಡಿ ತಿಳಿಸಿದ್ದಾರೆ. ನಾವು ತಕ್ಷಣವೇ ಸ್ಥಳಕ್ಕೆ ಧಾವಿಸಿ ನೋಡಿದಾಗ ನನ್ನ ಗಂಡ ಮೃತಪಟ್ಟಿದ್ದರು. ನಂತರ ಮೃತದೇಹ ಪರೀಕ್ಷೆಗಾಗಿ ಹುಮನಾಬಾದ್ ಸರಕಾರಿ ಆಸ್ಪತ್ರೆಗೆ ಮೃತದೇಹ ಸಾಗಿಸಿದ್ದೆವು ಎಂದು ಮೃತ ವ್ಯಕ್ತಿಯ ಪತ್ನಿ ಅನುಸೂಯ ದೂರು ನೀಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಹುಮನಾಬಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Edited By : Abhishek Kamoji
Kshetra Samachara

Kshetra Samachara

29/01/2025 07:44 pm

Cinque Terre

6.06 K

Cinque Terre

0