", "articleSection": "Politics,Government,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1738132328-A1~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯನಗರ: ಇಷ್ಟು ದಿನ ಕೆಕೆಆರ್ಡಿಬಿ ಅನುದಾನದಲ್ಲಿ ವಿಜಯನಗರ ಕ್ಷೇತ್ರಕ್ಕೆ ತಾರತಮ್ಯ ಆಗಿದೆ ಅಂತ ಸಚಿವ ಜಮೀರ್ ಅಹ್ಮದ್ ವಿರುದ್ಧ ಮುನಿಸಿಕೊಂಡಿದ್...Read more" } ", "keywords": ",Vijayanagara,Politics,Government,News,Public-News", "url": "https://publicnext.com/node" }
ವಿಜಯನಗರ: ಇಷ್ಟು ದಿನ ಕೆಕೆಆರ್ಡಿಬಿ ಅನುದಾನದಲ್ಲಿ ವಿಜಯನಗರ ಕ್ಷೇತ್ರಕ್ಕೆ ತಾರತಮ್ಯ ಆಗಿದೆ ಅಂತ ಸಚಿವ ಜಮೀರ್ ಅಹ್ಮದ್ ವಿರುದ್ಧ ಮುನಿಸಿಕೊಂಡಿದ್ದ ಶಾಸಕ ಗವಿಯಪ್ಪ ಇದೀಗ ಡಿಎಂಎಫ್ ಅನುದಾನದಲ್ಲೂ ತಾರತಮ್ಯ ಆಗಿದೆ ಅಂತ ಸಚಿವ ಜಮೀರ್ ವಿರುದ್ಧ ಮುನಿಸಿಕೊಂಡಿದ್ದಾರೆ.
ಇದೇ ವಿಚಾರಕ್ಕೆ ನಿನ್ನೆ ನಡೆದ ಕೆಡಿಪಿ ಸಭೆಯಲ್ಲಿ ಡಿಎಂಎಫ್ ಅನುದಾನ ವಿಚಾರಕ್ಕೆ ವೇದಿಕೆ ಮೇಲೆಯೇ ಶಾಸಕ ಗವಿಯಪ್ಪ ಅಸಮಾಧಾನ ಹೊರಹಾಕಿರೋ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಕೆಲವು ದಿನಗಳ ಹಿಂದೆ ಡಿಎಂಎಫ್ ಅನುದಾನ ಹಂಚಿಕೆ ಮಾಡುವ ವಿಚಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಡಿಸಿ ಕರೆದ ಸಭೆಗೆ ವಿಜಯನಗರ ಕ್ಷೇತ್ರದ ಶಾಸಕ ಗವಿಯಪ್ಪ ಸಭೆಗೆ ಗೈರಾಗಿ ಅಸಮಾಧಾನ ಹೊರಹಾಕಿದ್ರು. ಆ ಮುನಿಸನ್ನ ತಣಿಸಲು ಶಾಸಕ ಗವಿಯಪ್ಪ ಅವರ ಕೈಹಿಡಿದು ತಣಿಸಲು ಸಚಿವ ಜಮೀರ್ ಸರ್ಕಸ್ ಮಾಡಿದ್ರು. ಜೊತೆಗೆ ಹೊಸಪೇಟೆ ತಾಲೂಕಿನ ಏಳು ಕೆರೆ ತುಂಬಿಸುವ ವಿಚಾರ ಮಾತಾಡಿ, ಇಡೀ ಕೆಡಿಪಿ ಸಭೆ ಮುಗಿಯುವವರೆಗೆ ಸುಮ್ಮನೇ ಕುಳಿತು ಸುಮ್ಮನೇ ವಾಪಸ್ ಹೋಗಿದ್ರು.
PublicNext
29/01/2025 12:02 pm