", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/286525-1738082763-WhatsApp-Image-2025-01-28-at-10.15.55-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ArujunChitradruga" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿತ್ರದುರ್ಗ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಮಧ್ಯೆ ಬ್ಯಾಂಕ್ ನಿಂದ ಸಾಲ ಪಡೆದವರ ಮೇಲೂ ಅಮಾನುಷ ವರ್ತನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ...Read more" } ", "keywords": " Chitradurga, Bank Staff, Home Seized, Loan Default, Bank Auction, Karnataka News, Chitradurga News, Banking Sector, Debt Recovery.,Chitradurga,Crime,Law-and-Order", "url": "https://publicnext.com/node" }
ಚಿತ್ರದುರ್ಗ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಮಧ್ಯೆ ಬ್ಯಾಂಕ್ ನಿಂದ ಸಾಲ ಪಡೆದವರ ಮೇಲೂ ಅಮಾನುಷ ವರ್ತನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಕೊಳಾಳ್ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಸಾಲ ಪಡೆದವರ ಮೇಲೆ IDFC ಬ್ಯಾಂಕ್ ಸಿಬ್ಬಂದಿ ಅಮಾನವೀಯ ವರ್ತನೆ ತೋರಿದ್ದು ಇದೀಗ ಬೆಳಕಿಗೆ ಬಂದಿದೆ.
ಲೋನ್ ಕಂತು ಕಟ್ಟದ್ದಕ್ಕೆ ಕುಟುಂಬವನ್ನೇ ಹೊರಹಾಕಿ ಬ್ಯಾಂಕ್ ಸಿಬ್ಬಂದಿ ಬೀಗ ಜಡಿದಿದ್ದಾರೆ. ಬ್ಯಾಂಕ್ ಸಿಬ್ಬಂದಿಯ ಅಮಾನವೀಯ ವರ್ತನೆಗೆ ಬಡ ಕುಟುಂಬ ಬೀದಿ ಪಾಲಾಗಿದೆ. ಮನೆ ಬಳಕೆ ವಸ್ತುಗಳನ್ನ ಒಳಗೇ ಇಟ್ಟು ಬೀಗ ಜಡಿದು ಹೊರ ಹಾಕಿದ್ದಾರೆ. ರಮೇಶ್ ಹಾಗೂ ಸುಜಾತ ದಂಪತಿಗಳನ್ನ ಹೊರ ಹಾಕಿ ಸೀಜ್ ಮಾಡಲಾಗಿದೆ.
ಕಳೆದ ನಾಲ್ಕು ತಿಂಗಳಿಂದ ಮನೆಯ ಮುಂದಿನ ಮೆಟ್ಟಿಲು ಕೆಳಗೇ ಈ ಕುಟುಂಬ ವಾಸ ಮಾಡುತ್ತಿದೆ. ಎರಡೂವರೆ ವರ್ಷದ ಮಗುವನ್ನು ಕಟ್ಟಿಕೊಂಡು ಬಡ ಕುಟುಂಬ ನರಕ ಯಾತನೆ ಅನುಭವಿಸುತ್ತಿದೆ. 2021 ರಲ್ಲಿ IDFC ಫರ್ಸ್ಟ್ ಬ್ಯಾಂಕ್ ನಿಂದ 5 ಲಕ್ಷ ಲೋನ್ ರಮೇಶ್ ಪಡೆದಿದ್ದರು. ಕಂತು ಕಟ್ಟಲಾಗದೇ ಚಿಕ್ಕಮಗಳೂರಿಗೆ ದುಡಿಯಲು ಹೋಗಿದ್ದ ರಮೇಶ್. ಈ ವೇಳೆ ಪಾತ್ರೆ-ಪಗಡೆ, ಬಟ್ಟೆ-ಬರೆ ಒಳಗೇ ಇಟ್ಟು ಮನೆ ಸೀಜ್ ಮಾಡಿದ್ದಾರೆ ಎಂದು ರಮೇಶ್ ಪತ್ನಿ ಸುಜಾತ ಕಣ್ಣೀರಿಟ್ಟಿದ್ದಾರೆ.
PublicNext
28/01/2025 10:16 pm