", "articleSection": "Politics,Law and Order,Government,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1738053104-V3~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MahanteshMolakalmuru" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೊಳಕಾಲ್ಮುರು: ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಪಿಎಲ್‌ಡಿ) ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆ ಚುನಾವಣೆಯ ಪ...Read more" } ", "keywords": ",Chitradurga,Politics,Law-and-Order,Government,News,Public-News", "url": "https://publicnext.com/node" } ಮೊಳಕಾಲ್ಮುರು: ಪಿಎಲ್ ಡಿ ಬ್ಯಾಂಕ್ ಚುನಾವಣೆ ಬಗ್ಗೆ ಮತದಾರರಿಗೆ ಮಾಹಿತಿ ಇಲ್ಲ!- ಅಧಿಕಾರಿಗಳಿಗೆ ತೀವ್ರ ತರಾಟೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮುರು: ಪಿಎಲ್ ಡಿ ಬ್ಯಾಂಕ್ ಚುನಾವಣೆ ಬಗ್ಗೆ ಮತದಾರರಿಗೆ ಮಾಹಿತಿ ಇಲ್ಲ!- ಅಧಿಕಾರಿಗಳಿಗೆ ತೀವ್ರ ತರಾಟೆ

ಮೊಳಕಾಲ್ಮುರು: ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಪಿಎಲ್‌ಡಿ) ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆ ಚುನಾವಣೆಯ ಪ್ರಕ್ರಿಯೆಯಲ್ಲಿ ಕಾನೂನು ಉಲ್ಲಂಘಿಸಿ ಮನಬಂದಂತೆ ನಡೆಸುವ ಹುನ್ನಾರ ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿ ಸೋಮವಾರ ಕೆಲವು ಮತದಾರರು ಚುನಾವಣಾಧಿಕಾರಿ ಕೆ.ಮಹೇಶ್ ಅವರನ್ನು ಏರುಧ್ವನಿಯಲ್ಲಿಯೇ ತರಾಟೆ ತೆಗೆದುಕೊಂಡರು.

ಬ್ಯಾಂಕ್ ಕಾರ್ಯದರ್ಶಿ ನಾಗರಾಜ್ ಇದುವರೆಗೂ ಮತದಾರರಿಗೆ ಹಾಗೂ ಸದಸ್ಯರಿಗೆ ಚುನಾವಣೆ ಪ್ರಕ್ರಿಯೆ ನಡೆಸುವ ಸಂಬಂಧ ಯಾವುದೇ ರೀತಿಯ ಮಾಹಿತಿ ನೀಡದೆ, ತಮಗಿಷ್ಟ ಬಂದವರಿಗೆ ಮಾತ್ರ ಚುನಾವಣಾ ಪ್ರಕ್ರಿಯೆಗಳನ್ನು ತಿಳಿಸಿದ್ದಾರೆ. ನಾವು ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ಹೊಂದಿದ್ದೇವೆ. ಆದರೆ, ನಮ್ಮನ್ನು ಕಡೆಗಣಿಸಿ ನಮಗೆ ಮಾಹಿತಿಯೇ ನೀಡಿಲ್ಲ. ಈ ಚುನಾವಣೆಯನ್ನು ಅವರ ಅನುಕೂಲಕ್ಕೆ ಹಾಗೂ ಅವರಿಗೆ ಬೇಕಾದವರಿಗೆ ಸ್ಪರ್ಧಿಸಲು ಮಾತ್ರ ನಡೆಸಲು ಮುಂದಾಗಿದ್ದಾರೆ. ಈ ವಿಷಯದಲ್ಲಿ ನೀವು ಪಾಲುದಾರರಾಗಿದ್ದೀರಾ ಎಂದೆಲ್ಲಾ ಮಹೇಶ್ ಅವರನ್ನು ತರಾಟೆ ತೆಗೆದುಕೊಂಡರು.

ಬ್ಯಾಂಕ್ ಬೈಲಾ ಪ್ರಕಾರ ಚುನಾವಣಾ ಪೂರ್ವ ಚಟುವಟಿಕೆಗಳನ್ನು ಅರ್ಹ ಮತದಾರರ ಗಮನಕ್ಕೆ ತರಬೇಕಿದೆ. ಈ ಸಂಬಂಧ ಹೆಚ್ಚು ಪ್ರಚಾರ ನಡೆಸಿ ಪಾರದರ್ಶಕ ಚುನಾವಣೆ ನಡೆಯಲು ಆದ್ಯತೆ ನೀಡಬೇಕಿತ್ತು. ಚುನಾವಣೆ ಚಟುವಟಿಕೆಗಳ ಮಾಹಿತಿಯ ಪ್ರಕ್ರಿಯೆಗಳನ್ನು ನೋಟಿಸ್ ಬೋರ್ಡ್‌ನಲ್ಲಿ ಇದುವರೆಗೂ ಪಕಟಿಸಿಲ್ಲ. ನಾವು ಭಾನುವಾರ ನಾಮಪತ್ರ ಸಲ್ಲಿಸಲು ಆಗಮಿಸಿದ್ದೆವು. ಆದರೆ, ಬ್ಯಾಂಕ್‌ ಗೆ ಬೀಗ ಜಡಿಯಲಾಗಿತ್ತು ಎಂದು ಟೈಲರ್ ಬಿ.ಎಲ್.ತಿಪ್ಪೇಸ್ವಾಮಿ ಹಾಗೂ ವಿನಯ್ ಕುಮಾರ್ ಜಂಟಿಯಾಗಿ ಅಧಿಕಾರಿಯ ಬಳಿ ವಾಗ್ವಾದ ನಡೆಸಿದರು.

ಹಿಂದೆ ನಮಗೆ ನೋಟಿಸ್ ನೀಡಿ ಚುನಾವಣಾ ವಿಷಯವನ್ನು ಗಮನಕ್ಕೆ ತರಲಾಗುತ್ತಿತ್ತು. ಆದರೆ, ಈಗ ಕೆಲವರ ಹಿತಾಸಕ್ತಿಗಾಗಿ ನಮಗೆ ಮಾಹಿತಿ ನೀಡದೇ ನಮ್ಮನ್ನು ದೂರ ಉಳಿಯುವಂತೆ ನೋಡಿಕೊಳ್ಳಲಾಗಿದೆ. ಜನವರಿ 21ರಿಂದ ನಾಮಪತ್ರ ಸಲ್ಲಿಸಬೇಕಿದ್ದು, ನಮಗೆ ನಿನ್ನೆ ರಾತ್ರಿ ಈ ವಿಷಯ ಅವರಿವರಿಂದ ತಿಳಿಯುವಂತಾಗಿದೆ. ಇಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ಈಗ ನಾವು ತರಾತುರಿಯಲ್ಲಿ ಅಗತ್ಯ ದಾಖಲೆ, ಅರ್ಜಿ ಪಡೆದು ನಾಮಪತ್ರ ಸಲ್ಲಿಸಲು ಆಗಮಿಸಿದ್ದೇವೆ. ಯಾರೋ ಹೇಳಿದಂತೆ ಇಲ್ಲಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಈ ಸಂಬಂಧ ಮೇಲಧಿಕಾರಿಗಳು ಇತ್ತ ಗಮನ ಹರಿಸಿ ಕೆಲವು ವ್ಯಕ್ತಿಗಳ ಕಪಿಮುಷ್ಟಿಯಲ್ಲಿರುವ ಈ ಬ್ಯಾಂಕ್ ಹಿಡಿತನ್ನು ತಪ್ಪಿಸಿ ಪಾರದರ್ಶಕವಾದ ಆಡಳಿತ ವ್ಯವಸ್ಥೆಗೆ ಮುಂದಾಗಬೇಕಿದೆ ಎಂದು ಕಿಡಿಕಾರಿದರು.

ಮಾತಿನ ಜಟಾಪಟಿ ಕೈ ಮೀರುವ ಹಂತ ತಲುಪುತ್ತಿದ್ದ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಹರಸಾಹಸ ಪಟ್ಟರು.

Edited By : Suman K
Kshetra Samachara

Kshetra Samachara

28/01/2025 02:01 pm

Cinque Terre

6.88 K

Cinque Terre

0

ಸಂಬಂಧಿತ ಸುದ್ದಿ